ತಮಿಳುನಾಡು : ಬೆಂಗಳೂರು ಆಸಿಡ್ ದಾಳಿಕೋರ ಅಂತು ಬಲೆಗೆ ಬಿದ್ದಿದ್ದಾನೆ. ಬೆಂಗಳೂರು ಸುಂಕದಕಟ್ಟೆಯಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ತಪ್ಪಿಸಿಕೊಂಡಿದ್ದ ಸೈಕೋ ನಾಗೇಶ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸ್ವಾಮೀಜಿ ವೇಷದಲ್ಲಿ ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದ ಸೈಕೋ ನಾಗೇಶ್ ನನ್ನು ತಿರುವಣ್ಣಾಮಲೈನಲ್ಲಿ ಖಾಕಿ ಬಲೆಗೆ ಬಿದ್ದಿದ್ದಾನೆ.
ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ. 16 ದಿನಗಳ ಬಳಿಕ ಸೈಕೋ ನಾಗೇಶ್ ನ ಹೆಡೆಮುರಿ ಕಟ್ಟಲಾಗಿದೆ.