ಮಂಗಳೂರು : ಶ್ರೀಲಂಕಾ ತನ್ನ ಇತಿಹಾಸದಲ್ಲಿಯೇ ಕರಾಳ ದಿನಗಳನ್ನು ಎದುರಿಸುತ್ತಿದೆ. ಘೋರ ಆರ್ಥಿಕ ಬಿಕ್ಕಟ್ಟಿಗೆ ತುತ್ತಾಗಿರುವ ದ್ವೀಪ ರಾಷ್ಟ್ರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿವೆ. ಬಂಕ್‌ಗಳಲ್ಲಿ ತೈಲ ಲಭ್ಯವಾಗುತ್ತಿಲ್ಲ. ಇನ್ನೊಂದೆಡೆ ಅಗತ್ಯ ವಸ್ತುಗಳೂ ಸಿಗುತ್ತಿಲ್ಲ. ಇದು ಬೃಹತ್ ಪ್ರತಿಭಟನೆಗಳಿಗೆ ಕಾರಣವಾಗುತ್ತಿದೆ. ಅದರ ಬೆನ್ನಲ್ಲೇ ಅಲ್ಲಿನ ನಾಗರಿಕರು ಭಾರತದ ಆಶ್ರಯ ಕೋರಲು ಆರಂಭಿಸಿದ್ದಾರೆ.
ಶ್ರೀಲಂಕಾದಲ್ಲಿ ಉದ್ಯೋಗ ಹಾಗೂ ಆಹಾರದ ಕೊರತೆಯ ಕಾರಣ ಅಲ್ಲಿ ಬದುಕಲು ಸಾಧ್ಯವಾಗದೆ ಭಾರತದತ್ತ ನಿರಾಶ್ರಿತರು ಆಗಮಿಸುತ್ತಿದ್ದು ಅದು ಕರಾವಳಿ ತೀರದತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ, ಮಂಗಳೂರು ಸೇರಿದಂತೆ ಹಲವು ಕರಾವಳಿ ತೀರದತ್ತ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.