ಬೆಂಗಳೂರು : ವರನಟ, ಕನ್ನಡ ಸಿನಿ ಪ್ರಿಯರ ಆರಾಧ್ಯದೈವ ಡಾ.ರಾಜ್‌ಕುಮಾರ್ ಕುಟುಂಬದಿಂದ ಮತ್ತೊಬ್ಬ ಸದಸ್ಯರು ಸಿನಿಮಾ ಕ್ಷೇತ್ರಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ನಟ ಡಾ.ಶಿವರಾಜ್‌ಕುಮಾರ್ ಅವರ ಪುತ್ರಿ ನಿವೇದಿತಾ ರಾಜ್‌ಕುಮಾರ್ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಯಾಗಿದ್ದು, ಹೊಸ ಪ್ರತಿಭೆಗಳಿಗೆ ಸಾಥ್ ಕೊಟ್ಟಿದ್ದಾರೆ.
ಕನ್ನಡದಲ್ಲಿ ಕಮರ್ಷಿಯಲ್ ಸಿನಿಮಾಗಳ ನಡುವೆ ಮೌಲ್ಯಾಧಾರಿತ ಚಿತ್ರಗಳು ಕೂಡ ಸದ್ದು ಮಾಡುತ್ತಿವೆ. ಇದರ ಜೊತೆಗೆ ಕಮರ್ಷಿಯಲ್ ಕಥೆ ಹೇಳುವಂಥ ವೆಬ್ ಸೀರಿಸ್‌ಗಳಿಗೆ ಯಾವುದೇ ಕೊರತೆ ಇಲ್ಲ ಅನ್ನೋದನ್ನ ತೋರಿಸೋದಕ್ಕೆ ಎಂಟ್ರಿಕೊಡುತ್ತಿದೆ ‘ಹನಿಮೂನ್’ ಕಹಾನಿ.
ಹೌದು, ವೀಕ್ಷಕರನ್ನು ಮತ್ತೆ ರಂಜಿಸಲು ವೆಬ್ ಸೀರಿಸ್ ಮೂಲಕ ಅಟೆಂಡೆನ್ಸ್ ಹಾಕುತ್ತಿದ್ದಾರೆ ನಾಗಭೂಷಣ್. ಮೂಲಕ ‘ಹನಿಮೂನ್’ ಕಥೆ ಹೇಳಲು ನಾಗಭೂಷಣ್ & ಟೀಂ ಸಜ್ಜಾಗಿದ್ದು, ಮತ್ತೆ ಕನ್ನಡ ಪ್ರೇಕ್ಷಕರು ನಗೆಗಡಲಲ್ಲಿ ತೆಲೋದು ಗ್ಯಾರಂಟಿ. ಅದ್ರಲ್ಲೂ ನಟ ಡಾ. ಶಿವರಾಜ್‌ಕುಮಾರ್ ಅವರ ಪುತ್ರಿ ಈ ವೆಬ್ ಸೀರಿಸ್ ಮೂಲಕ ನಿರ್ಮಾಣ ಕ್ಷೇತ್ರಕ್ಕೂ ಎಂಟ್ರಿ ಕೊಡುತ್ತಿದ್ದಾರೆ.