ಪಂಚಾಯತಿ ಕಾರ್ಯದರ್ಶಿಯಿಂದಲೇ ಗ್ರಾಮ ಪಂಚಾಯತಿ ಕಟ್ಟಡ ಮಾರಾಟ

Spread the love

ಮುಜಾಫರ್​​​ಪುರ; ದೇಶ ಇನ್ನು ಎಂತಹ ಅಧಿಕಾರಿಗಳನ್ನ ಕಾಣಬೇಕು ನಾ ಕಾಣೆ. ಗ್ರಾಮ ಪಂಚಾಯತಿ ಕಾರ್ಯದರ್ಶಿ ಸೇರಿದಂತೆ ಇಬ್ಬರು ಅಧಿಕಾರಿಗಳು ಪಂಚಾಯಿತಿ ಕಟ್ಟಟವನ್ನೇ ಮಾರಾಟ ಮಾಡಿದ್ದಾರೆ. ಬಿಹಾರದಲ್ಲಿ ಕಂದಾಯ ಸಚಿವ ರಾಮ್‌ಸುರತ್ ರಾಯ್ ಅವರ ವಿಧಾನಸಭಾ ಕ್ಷೇತ್ರದಲ್ಲಿ ಪಂಚಾಯತ್ ಭವನವನ್ನು ನೆಲಸಮ ಮಾಡಿ ಮಾರಾಟ ಮಾಡಿದ್ದಾರೆ.
ಬಿಹಾರದ ಮುಜಾಫರ್‌ಪುರದ ಔರೈ ಬ್ಲಾಕ್‌ನಲ್ಲಿರುವ ಔರೈ ಪಂಚಾಯತ್ ಭವನವನ್ನು ಯಾವುದೇ ಸರ್ಕಾರಿ ಆದೇಶವಿಲ್ಲದೆ ಮಾರಾಟ ಮಾಡಲಾಗಿದೆ. ಮುಖ್ಯಾಧಿಕಾರಿ ಹಾಗೂ ಪಂಚಾಯಿತಿ ಕಾರ್ಯದರ್ಶಿಯ ಕುಮ್ಮಕ್ಕಿನಿಂದ ಮಾರಾಟ ನಡೆದಿದೆ ಎನ್ನಲಾಗಿದೆ. ಕಟ್ಟಡವನ್ನು ಜೆಸಿಬಿಯಿಂದ ಕೆಡವಿ ಅದರಲ್ಲಿದ್ದ ಇಟ್ಟಿಗೆಗಳನ್ನ ಮಾರಾಟ ಮಾಡಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪಂಚಾಯತ್​ ರಾಜ್​ ಇಲಾಖೆ ಆರೋಪಿತ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿದೆ.


Spread the love

Leave a Reply

error: Content is protected !!