Breaking News

ಬಿಜೆಪಿ ಸರ್ಕಾರ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತಿದೆ- ವೀರಪ್ಪ ಮೊಯ್ಲಿ

Spread the love

ಧಾರವಾಡ; ಕರ್ನಾಟಕದಲ್ಲಿ ಬಿಜೆಪಿ ಸರಕಾರ ಮೊಸರಿನಲ್ಲಿ ಕಲ್ಲ ಹುಡುಕು ಕೆಲಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯ್ಲಿ ಆರೋಪಿಸಿದರು. ನಗರದಲ್ಲಿ ಮಾತನಾಡಿದ ಅವರು ಕೇಂದ್ರ ರಾಜ್ಯ ಸರಕಾರಗಳ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದು
ಸರಕಾರಕ್ಕೆ‌ ಸರಿಸಮಾನವಾದ ನ್ಯಾಯ ಕೊಡಿಸಲು ಆಗುತ್ತಿಲ್ಲ.
ನೀರು ಶಾಂತಾವಾಗಿದ್ರೆ ಅದನ್ನ ಕಲಕುವ ಕೆಲಸ ಮಾಡುತ್ತಿದೆ ಬಿಜೆಪಿ ಮಾಡುತಿದೆ ಎಂದ ಅವರು ಭಾರತೀಯ ಜನತಾ ಪಕ್ಷಸಮನ್ವಯದ ರಾಜಕೀಯ ಮಾಡುತ್ತಿಲ್ಲ ಎಂದರು. ಇನ್ನು ಮುಖ್ಯಮಂತ್ರಿ ಬೊಮ್ಮಾಯಿ ಆಲೋಚನೆ ಮಾಡಬೇಕಾಗಿದೆ.
ಕಲಹಾಪ್ರಿಯ ಸಿಎಂ ಎಂಬ ಬಿರುದು ಪಡೆಯಬಾರದು ಇದು ಸರಿಯಲ್ಲ. ಈಗಿನ ಎಲ್ಲ ವಿದ್ಯಮಾನ ನೋಡಿದರೆ
ಮಂತ್ರಿಗಳ ಸಿಎಂ ಹತೋಟಿ ಯಲ್ಲಿ ಇಲ್ಲ ಅವರು
ಆರ್ ಎಸ್ ಎಸ್ ಬಜರಂಗದಳ ಹೇಳಿದ ಪ್ರಕಾರ ನಡೆದುಕೊಳ್ಳುತಿದ್ದು, ಯಾವುದು ರಾಜ್ಯದಲ್ಲಿ ಬಿಜೆಪಿ ಕಂಟ್ರೋಲ್ ನಲ್ಲಿ ಇಲ್ಲ ಮುಖ್ಯಮಂತ್ರಿಗಳಿಗೆ ಗುರುತವಾದ
ಜವಾಬ್ದಾರಿ ಬರಬೇಕಿದೆ ಎಂದು ಸಲಹೆ ನೀಡಿದರು. ಇನ್ನು
ಜಾತಿ ಗದ್ದಲ ಮಾಡುವುದರಿಂದ ಮತ ಬರುತ್ತೆ ಅಂತ ತಿಳಿದುಕ್ಕೊಂಡಿದ್ದಾರೆ ಅದು ಅವರ ಭಮೆ ಶಾಂತಿ ಪ್ರಿಯ ರಾಷ್ಟವಾಗಿದೆ ಭಾರತಕ್ಕೆ ಭವ್ಯ ಪರಂಪರೆ ಇದೆ ಎಂದು ತೀಕ್ಷ್ಣವಾಗಿ ರಾಜ್ಯ ಸರ್ಕಾರದ ನಡೆ ಖಂಡಿಸಿದರು.
ಇದೆ ಸಂದರ್ಭದಲ್ಲಿ
ಪಿ ಎಸ್ ಐ ನೇಮಕಾತಿ ವಿಚಾರವಾಗಿ ಮಾತನಾಡಿದ ಅವರು ಗೃಹ ಸಚಿವರ ಜವಾಬ್ದಾರಿಯಾಗಿದೆ, ಪಿ ಎಸ್ ಐ ನೇಮಕಾತಿಯನ್ನು ಗೃಹ ಸಚಿವರೆ ಮಾಡೋದು. ಯಾರು ಅಧಿಕಾರಿಗಳು ಅವರ ಹತೋಟಿಯಲ್ಲಿಲ್ಲ
ನಾನು ಸಿಎಂ ಆಗಿದ್ದಾಗ ನೂರಾರು ಸಮ್ಮಿಶ್ರ ಸರಕಾರ ನೇಮಕ ಮಾಡಿದ್ದೆನೆ.ಒಂದೆ ಒಂದು ಹಗರಣ ಹೊರ ಬಂದಿಲ್ಲ. ಇದು ಆಡಳಿತದ ವೈಖರಿ. ಸಿಎಂ ಅವರು ಜವಾಬ್ದಾರಿಯನ್ನ ಎಲ್ಲ ಹೊರಬೇಕಿದೆ. ಆಯಾ ಇಲಾಖೆಯ ಸಚಿವರುಗಳು ಹೊರಬೇಕಾಗಿದೆ.
ಇನ್ನುಪಿ ಎಸ್ ಐ ನೇಮಕಾತಿಯಲ್ಲಿ ಉನ್ನತ ಅಧಿಕಾರಿಗಳು ಸಸ್ಪೆಂಡ್ ಆಗಲಿಲ್ಲ ಸಣ್ಣ ಪುಟ್ಟ ಅಧಿಕಾರಿಗಳ ಮೇಲೆ ಗದಪ್ರಹಾರ ಮಾಡಿದರು.
ಸಚಿವರುಗಳು ಪದವಿ ಬಿಟ್ಟು ಕೊಡಲಿಲ್ಲ ನೈತಿಕ, ಬೌತಿಕ ಜವಾಬ್ದಾರಿ ಎರಡು ಸರಕಾರಕ್ಕೆ ಇರಲಿಲ್ಲ ಎಂದು ಕಿಡಿಕಾರಿದರು‌.
*ಕೈ ಅಧಿಕಾರಕ್ಕೆ* ಮುಂದಿನ ಚುಣಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದ‌ ವಿರಪ್ಪ ಮೂಯಿಲಿ ಎಂದು ಭವಿಷ್ಯ ನುಡಿದ ಅವರು
ಕಾಂಗ್ರೆಸ್ ಸೇರಿದಂತೆ ಇನ್ನಾವುದೇ ಪಕ್ಷದವರು ಈಗಲೇ ಎಲ್ಲವನ್ನೂ ಬಲ್ಲೆವು ಎಂಬ ಅಹಂಬಾವ ಇರಬಾರದು. ಪಾರದರ್ಶಕವಾದ ಆಡಳಿತ ಕೊಡಬೇಕು ಇದು ಸರ್ಕಾರದ ಜವಾಬ್ದಾರಿ.
ಜನರಲ್ಲಿ ವಿಶ್ವಾಸ ತುಂಬಬೇಕು ಒಳ್ಳೆಯ ಆಡಳಿತ ಕೊಡಬೇಕು ಅಂದಾಗ ಮಾತ್ರ ಒಳ್ಳೆಯ ಸರ್ಕಾರ ಎನಿಸುತ್ತದೆ ಎಂದರು.
ಸಿದ್ದರಾಮಯ್ಯ ಡಿಕೆಶಿ ನಡುವೆ ಗುದ್ದಾಟ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು,
ಕಾಂಗ್ರೆಸ್ ನಲ್ಲಿ ಹತೋಟಿ ಇದೆ ಕೇಂದ್ರದ ನಾಯಕರು ಸಹ ಹತೋಟಿ ಹೊಂದಿದ್ದಾರೆ. ಆದರೆ
ಬಿಜೆಪಿ ಯಲ್ಲಿ ಯಾವುದೇ ಹತೋಟಿ ಇಲ್ಲ ಎಂದು ಹೇಳಿದ ಅವರು ಬಿಜೆಪಿ ಮಾಡಿದ್ದೆ ಕಾನೂನಾಗಿದೆ. ಯಾವುದೇ
ಹತೋಟಿ ತಪ್ಪಿದರೆ ಅಧಿಕಾರಕ್ಕೆ ಇರಲು ಆಗಲ್ಲ ಇದು ನನ್ನದು
ಜನಗಳಲ್ಲಿ ಅಭಿಪ್ರಾಯ ಇದೆ ಎಂದರು.
ಒಬ್ಬರು ಸಿ ಎಲ್ ಪಿ ಲಿಡರ್ ,ಇಬ್ಬೊಬ್ಬರು ಅದ್ಯಕ್ಷರು, ಅವರವರ ಜವಾಬ್ದಾರಿ ನಿರ್ವಹಿಸಿಕ್ಕೊಂಡು ಹೋಗಬೇಕು ಸರಿಯಾಗಿ ಜನರ ಹತ್ರ ಹೋದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಸಲಹೆ ನೀಡಿದರು. ಮುಖಂಡರಾದ ಸದಾನಂದ ಡಂಗನವರ, ವಸಂತ ಲದ್ವಾ, ರಾಬರ್ಟ್ ದದ್ದಾಪುರಿ ಮುಂತಾದವರಿದ್ದರು.


Spread the love

About Karnataka Junction

[ajax_load_more]

Check Also

ಹಸು ಕೆಚ್ಚಲು ದುರ್ಘಟನೆಯಲ್ಲಿ ಜಮೀರ್ ಅಹ್ಮದ್ ನಾಟಕ ರಚನೆ ಮಾಡ್ತಿದ್ದಾರೆ – ಹೊಸ ಬಾಂಬ್ ಸಿಡಿಸಿದ ಮುತಾಲಿಕ್‌

Spread the loveಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆದ ಘಟನೆ ಅತ್ಯಂತ ಶೋಚನೀಯ. ಸಚಿವ ಜಮೀರ್ ಅಹ್ಮದ್ ನಾಟಕ ರಚನೆ ಆಡುತ್ತಿದ್ದಾರೆ ಎಂದು …

Leave a Reply

error: Content is protected !!