ಧಾರವಾಡ ; ಧಾರವಾಡ ಜಿಲ್ಲೆಗೆ ಇಂದು 16,500 ಕೋವಿಶಿಲ್ಡ್ ಲಸಿಕೆ ಬಂದಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಇಂದು (ಜೂ.9) ರಾಜ್ಯ ಸರ್ಕಾರದಿಂದ ಜಿಲ್ಲೆಗೆ 9,000 ಕೋವಿಶಿಲ್ಡ್ ಲಸಿಕೆ ಬಂದಿದ್ದು, ರಾಜ್ಯ ಸರ್ಕಾರ ಗುರುತಿಸಿರುವ 18 ರಿಂದ 44 ವರ್ಷದೊಳಗಿನ ಮುಂಚೂನಿ ಕಾರ್ಯಕರ್ತರಿಗೆ ಹಾಗೂ ಆದ್ಯಾತಾ ಗುಂಪಿನ ಕಾರ್ಯಕರ್ತರಿಗೆ ಈ ಲಸಿಕೆಯನ್ನು ನೀಡಲಾಗುವುದು. ಮತ್ತು ಕೇಂದ್ರ ಸರ್ಕಾರವು ಜಿಲ್ಲೆಯ 45 ವರ್ಷ ಹಾಗೂ 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ನೀಡಲು 7,500 ಕೋವಿಶಿಲ್ಡ್ ಲಸಿಕೆಯನ್ನು ಪೂರೈಸಿದೆ.
ಇಂದು ಜಿಲ್ಲೆಗೆ ಪೂರೈಕೆಯಾಗಿರುವ ಲಸಿಕೆಯನ್ನು ನಾಳೆ ಜಿಲ್ಲೆಯ ನಿಗದಿತ ಲಸಿಕಾ ಕೇಂದ್ರಗಳಲ್ಲಿ ನೀಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
