Breaking News

ಶಾಲಾ ಬೇಸಿಗೆ ರಜೆ ವಿಸ್ತರಣೆಗೆ ರುಪ್ಸಾ ವಿರೋಧ

Spread the love

ಬೆಂಗಳೂರು: ಇದೇ ಮೇ 16 ರಿಂದ ರಾಜ್ಯಾದ್ಯಂತ ಶಾಲೆಗಳು ಪ್ರಾರಂಭವಾಗುತಿದ್ದು. ಈ ಭಾರಿ ಶೈಕ್ಷಣಿಕ ವರ್ಷವನ್ನ 15 ದಿನ ಮುಂಚಿತವಾಗಿ ಶಾಲೆ ಪ್ರಾರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಮೇ 16 ರಿಂದ ಕಲಿಕಾ ಚೇತರಿಕೆ ಪ್ರಾರಂಭಿಸಲು ವೇಳಾಪಟ್ಟಿ ಕೂಡ ಶಿಕ್ಷಣ ಇಲಾಖೆ ಬಿಡುಗಡೆ ‌ಮಾಡಿದೆ.ಶಾಲೆ ಪ್ರಾರಂಭ ದಿನಾಂಕ ವಿಸ್ತರಣೆ ಮಾಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಸಿಎಂ ಪತ್ರ ಬರೆದಿದ್ದಾರೆ.
ಆದ್ರೆ ಶಾಲೆ ಪ್ರಾರಂಭದ ದಿನಾಂಕ ವಿಸ್ತರಣೆಗೆ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ತೀವ್ರವಾಗಿ ವಿರೋಧಿಸಿದೆ.ಕಳೆದ ಎರಡು ವರ್ಷಗಳಿಂದ ‌ಕೊರೊನಾ ದಿಂದ ಶಾಲೆ ಸರಿಯಾಗಿ ನಡೆದಿಲ್ಲ.ಮಕ್ಕಳಿಗೆ ಕಲಿಕಾ ಚೇತರಿಕೆ ಅಂಗವಾಗಿ 15 ದಿನ ಮುಂಚಿತವಾಗಿ ಶಾಲೆ ಪ್ರಾರಂಭಿಸಲು ಮುಂದಾಗಿದೆ ಇದನ್ನ ನಾವು ಸ್ವಾಗತಿಸುತ್ತೇವೆ..ಆದ್ರೆ ಶಾಲೆ ಪ್ರಾರಂಭದ ದಿನಾಂಕವನ್ನು ವಿಸ್ತರಣೆ ಮಾಡಬಾರದು ಅಂತ ಖಾಸಗಿ ಶಾಲೆಗಳ ಒಕ್ಕೂಟದ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಷಡಕ್ಷರಿ ಪತ್ರಕ್ಕೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತೀವ್ರ ಆಕ್ರೋಶ
ಷಡಕ್ಷರಿಯವರು ತಮ್ಮ ಸರ್ಕಾರಿ ಹುದ್ದೆಯನ್ನ ಬಳಸಿಕೊಂಡು ಮಕ್ಕಳ ಹಿತಾಸಕ್ತಿ ‌ಬಲಿಕೊಡೋದು ಸರಿಯಲ್ಲ.ಕಳೆದ ಎರಡು ವರ್ಷ ಶಾಲೆ ಮುಚ್ವಿದ ಕಾರಣ ಮಕ್ಕಳಿಗೆ ಸರಿಯಾಗಿ ಶಿಕ್ಷಣ ‌ಕೊಡಲು ಸಾಧ್ಯವಾಗಿಲ್ಲ. ಆದ್ರೆ ಷಡಕ್ಷರಿ ಅವರು ಸರ್ಕಾರಿ ನೌಕರರ ಸಂಘದ ‌ಮಾದರಿ ಅಧ್ಯಕ್ಷ ರಾಗಿರಬೇಕು.ಅದನ್ನ ಬಿಟ್ಟು ಸಂಘದ ಹೆಸರಿನಲ್ಲಿ ಕಚೇರಿಗೆ ಹೋಗದೇ ಕೆಲಸ ಮಾಡದೇ ನಮಗೆ ನೈತಿಕ ಪಾಠ ಮಾಡಲು ಅವರ ದಿವಾಳಿತನವನ್ನ ಎತ್ತಿ ತೋರಿಸತ್ತದೆ.ಆಲ್ಲದೆ ತಮ್ಮ ಐಷಾರಾಮಿ ಕಾರುಗಳಲ್ಲಿ ಕೆಲಸ ಮಾಡದ ಸರ್ಕಾರಿ ನೌಕರರನ್ನ ಹಿಂದೆ ಕೂರಿಸಿಕೊಂಡು ಓಡಾಡುವುದೇ ಇವರ ದೊಡ್ಡ ಕೆಲಸ..ಇನ್ನಾದ್ರು ಮಕ್ಕಳ ಶೈಕ್ಷಣಿಕ ಬದುಕಿನ ಕುರಿತು ವ್ಯತಿರಿಕ್ತ ಹೇಳಿಕೆ ‌ಕೊಡದಿರಲಿ
ಅಂತ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಎಂಗೆ ಪತ್ರ ಬರೆದ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ
ಷಡಕ್ಷರಿ ಅವರ ಹೇಳಿಕೆಗಳನ್ನ ಪರಿಗಣಿಸದಿರುವಂತೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸಿಎಂಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಶಾಲೆ ಪ್ರಾರಂಭದ ದಿನಾಂಕವನ್ನ ವಿಸ್ತರಣೆ ಮಾಡದೇ ಮೇ 16 ರಿಂದ ಶಾಲೆ ಪ್ರಾರಂಭಿಸುವಂತೆ ಅವರು ಮನವಿ ಮಾಡಿದ್ದಾರೆ.
ಇನ್ನೇನು ಬೇಸಿಗೆ ರಜೆ ಮುಗಿಯಲು ಹೆಚ್ಚು ದಿನಗಳು ಬಾಕಿಯಿಲ್ಲ. ಇದೇ ಸಂದರ್ಭದಲ್ಲಿ ಬೇಸಿಗೆಯ ತಾಮಪಾನವೂ ಕಡಿಮೆಯಾಗಿಲ್ಲ. ಮೇ 16ರಿಂದಲೇ ಮಕ್ಕಳು ಶಾಲೆಗೆ ತೆರಳಲು ಆರಂಭಿಸಿದರೆ ಮಕ್ಕಳಿಗೆ ತೀವ್ರ ಬಿಸಿಲಿನಿಂದ ಆರೋಗ್ಯ ಸಮಸ್ಯೆ ಎದುರಾಗಬಹುದು ಎಂಬ ಆತಂಕ ಎದುರಾಗಿದೆ. ಹೀಗಾಗಿ ಬೇಸಿಗೆ ರಜೆಯನ್ನು ಇನ್ನಷ್ಟು ದಿನಗಳವರೆಗೆ ವಿಸ್ತರಣೆ ಮಾಡುವಂತೆ ಮನವಿ ಕೇಳಿಬಂದಿದೆ. ಆದ್ರೆ, ಸಚಿವ ನಾಗೇಶ್ ಅವರು ನಿಗದಿಯಂತೆ ಶಾಲೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಕೋವಿಡ್‍ನಿಂದಾಗಿ ಕಳೆದ ಎರಡೂವರೆ ವರ್ಷಗಳಿಂದ ಶಾಲೆಗಳಲ್ಲಿ ಸರಿಯಾಗಿ ಭೌತಿಕ ತರಗತಿಗಳು ನಡೆದಿಲ್ಲ. ವಿದ್ಯಾರ್ಥಿಗಳು ಸಹ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಹೀಗಾಗಿ ಶೈಕ್ಷಣಿಕ ವರ್ಷವನ್ನು ಮೇ 16ರಿಂದ ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.


Spread the love

About Karnataka Junction

[ajax_load_more]

Check Also

ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು

Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇಸ್ ನಂಬರ್ …

Leave a Reply

error: Content is protected !!