Breaking News

ಶ್ರೀಲಂಕಾ ಹಿಂಸಾಚಾರ ಮತ್ತಷ್ಟು ಉಲ್ಬಣ

Spread the love

ಶ್ರೀಲಂಕಾ; ಕಳೆದ ಕೆಲ ದಿನಗಳಿಂದ ಶ್ರೀಲಂಕಾದಲ್ಲಿ ಉದ್ಭವವಾಗಿದ್ದ ಆರ್ಥಿಕ ಬಿಕ್ಕಟ್ಟು ಪರಿಸ್ಥಿತಿ ಇದೀಗ ಮತ್ತೊಂದು ಹಂತ ತಲುಪಿದ್ದು, ಪ್ರಧಾನಿ ಹುದ್ದೆಗೆ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಹಿಂಸಾಚಾರ ಮತ್ತಷ್ಟು ಭುಗಿಲೆದ್ದಿದ್ದು, ಆಡಳಿತರೂಢ ಪಕ್ಷದ ಸಂಸದನೋರ್ವ ಶವವಾಗಿ ಪತ್ತೆಯಾಗಿದ್ದಾರೆ.
ಮಹಿಂದಾ ರಾಜಪಕ್ಸೆ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಂತೆ ಪ್ರತಿಭಟನಾಕಾರರು ಸಂಸದನ ಕಾರು ಸುತ್ತುವರೆದಿದ್ದಾರೆ. ಈ ವೇಳೆ ಗುಂಡು ಹಾರಿಸಿದ್ದು, ಇಬ್ಬರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಸ್ಥಳೀಯ ಕಟ್ಟಡವೊಂದರಲ್ಲಿ ಹೋಗಿ ಅವಿತುಕೊಂಡಿದ್ದಾರೆ.
ಸಂಸದರು ಅವಿತುಕೊಂಡಿದ್ದ ಸ್ಥಳಕ್ಕೆ ಸಾವಿರಾರು ಪ್ರತಿಭಟನಾಕಾರರು ಲಗ್ಗೆ ಹಾಕುತ್ತಿದ್ದಂತೆ ಅವರು ಗುಂಡು ಹಾರಿಸಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆಂದು ಹೇಳಲಾಗ್ತಿದೆ. ಈಗಾಗಲೇ ಅವರ ಮೃತದೇಹ ವಶಕ್ಕೆ ಪಡೆದುಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಶ್ರೀಲಂಕಾದ ನಿಟ್ಟಂಬುವಾ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸಂಸದ ಅಮರಕೀರ್ತಿ ಸಾವನ್ನಪ್ಪಿದ್ದಾರೆ.
ಹಿಂಸಾಚಾರದ ವೇಳೆ ಶ್ರೀಲಂಕಾದ ಸಂಸದ ಮತ್ತು ಮಾಜಿ ಸಚಿವರ ನಿವಾಸಕ್ಕೆ ಬೆಂಕಿ ಹಚ್ಚಲಾಗಿದೆ. ಮಾಜಿ ಸಚಿವ ಜಾನ್ಸನ್​ ಫರ್ನಾಂಡೋ ಅವರ ಮೌಂಟ್​ ಲ್ಯಾವಿನಿಯಾ ನಿವಾಸ ಹಾಗೂ ಸಂಸದ ಸನತ್ ನಿಶಾಂತ್​ ಅವರ ನಿವಾಸಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.


Spread the love

About Karnataka Junction

    Check Also

    ಭಾನುಪ್ರಕಾಶ ಅಗಲಿಕೆಯಿಂದ ರಾಜ್ಯ ರಾಜಕೀಯಕ್ಕೆ ಬಹು ದೊಡ್ಡ ನಷ್ಟ: ಅರವಿಂದ ಬೆಲ್ಲದ

    Spread the loveಭಾನುಪ್ರಕಾಶ ಅಗಲಿಕೆಯಿಂದ ರಾಜ್ಯ ರಾಜಕೀಯಕ್ಕೆ ಬಹು ದೊಡ್ಡ ನಷ್ಟ: ಅರವಿಂದ ಬೆಲ್ಲದ ಹುಬ್ಬಳ್ಳಿ; ಸಂಘ ಪರಿವಾರದ ಹಿರಿಯ …

    Leave a Reply

    error: Content is protected !!