ಉಜ್ಜಯಿನಿ; ಮದುವೆ ಸಮಯದಲ್ಲಿ ಪವರ್ ಹೋದ ಪರಿಣಾಮ ವಧುವಿನ ಬದಲು ವಧುವಿನ ತಂಗಿಗೆ ತಾಳಿ ಕಟ್ಟಿ, ಈಗ ಅಕ್ಕ ತಂಗಿಯರಿಬ್ಬರು ಒಂದೇ ಹುಡುಗನ ಹೆಂಡ್ತಿಯಾಗಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ರಮೇಶ್ಲಾಲ್ ಅವರ ಇಬ್ಬರು ಪುತ್ರಿಯರಾದ ನಿಕಿತಾ ಮತ್ತು ಕರಿಷ್ಮಾ ಅವರು ವಿವಿಧ ಕುಟುಂಬಗಳ ಇಬ್ಬರು ಯುವಕರಾದ ದಂಗ್ವಾರ ಭೋಲಾ ಮತ್ತು ಗಣೇಶ್ ಅವರನ್ನು ವಿವಾಹವಾಗಿದ್ದಾರೆ. ಎನ್ನಲಾಗಿದೆ. ಅಂದ ಹಾಗೇ ಮದುವೆ ಸಮಯದಲ್ಲಿ ತಾಳಿಕಟ್ಟಿಸಿಕೊಳ್ಳಬೇಕಾದ ವಧು ಹಾಗೂ ಆಕೆಯ ತಂಗಿ ಒಂದೇ ತೆರನಾದ್ದ ಬಟ್ಟೆ ಧರಿಸಿದ್ದರು ಎನ್ನಲಾಗಿದ್ದು, ಈ ವೇಳೆಯಲ್ಲಿ ಇನ್ನೇನು ತಾಳಿ ಕಟ್ಟುವ ಸಮಯದಲ್ಲಿ ಕರೆಂಟ್ ಹೋಗಿದೆ. ಮದುವೆಯ ಆಚರಣೆಗಳ ಸಮಯದಲ್ಲಿ ಕರೆಂಟ್ ಹೋದ ಸಮಯದಲ್ಲಿ ಗೊಂದಲಕ್ಕೆ ಈಡಾದ ಮಧ್ಯೆದಲ್ಲಿ ವಧುವಿನ ತಂಗಿಗೆ ವರ ತಾಳಿ ಕಟ್ಟಿದ್ದಾನೆ ಎನ್ನಲಾಗಿದೆ. ಮತ್ತೆ ಮರುದಿನ ನಿಜವಾದ ವಧುವಿಗೆ ತಾಳಿಕಟ್ಟಿ ಮದುವೆ ಮಾಡಿದ್ದಾರೆ ಎನ್ನಲಾಗಿದೆ.
