ತಮಿಳುನಾಡು : ಹಸಿದು ಬಂದವರಿಗೆ ಹೊಟ್ಟೆ ತುಂಬೋವಷ್ಟು 1 ರೂ.ಗೊಂದು ಇಡ್ಲಿ ನೀಡುವ ಎಂ ಕಮಲಾತಾಲ್ ಎಂಬ ಇಡ್ಲಿ ಅಮ್ಮಾ ಎಂದೂ ಕರೆಯುವ ಬಡ ಮಹಿಳೆಗೆ ವಿಶೇಷ ಅಡುಗೆಮನೆಯನ್ನು ಉಡುಗೊರೆಯಾಗಿ ನೀಡಿದೆ.
ಎಂ ಕಮಲಾತಲ್ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ವಡಿವೇಲಂಪಾಳ್ಯಂ ಗ್ರಾಮದ ನಿವಾಸಿ. ವಯಸ್ಸಾದ ಈಕೆ ಗೋಡೆ ಕುಸಿದ ಮನೆಯಲ್ಲೇ ಪ್ರತಿದಿನ 1000 ಇಡ್ಲಿಗಳನ್ನು ತಯಾರಿಸುತ್ತಾಳೆ. ಇಲ್ಲಿ ಮಾರಾಟವಾಗುವ ಒಂದು ಇಡ್ಲಿಗೆ ಕೇವಲ 1 ರೂ. ಮಾತ್ರ ತೆಗೆದುಕೊಳ್ಳುತ್ತಾರೆ. ಸೌದೆ ಒಲೆಯಲ್ಲೇ ಅಡುಗೆ ಮತ್ತು ರುಬ್ಬುವ ಕಲ್ಲಿನಲ್ಲೇ ಚಟ್ನಿ ಮಾಡುತ್ತಾರೆ. ಆಕೆಯ ಉದ್ದೇಶ ಲಾಭ ಗಳಿಸುವುದಲ್ಲ. ಇದು ಮಾನವೀಯತೆಯ ಸೇವೆಯಾಗಿದೆ. ದೈನಂದಿನ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ತನ್ನ ಇಡ್ಲಿಗಳನ್ನು ಕೈಗೆಟುಕುವ ದರಕ್ಕೆ ಇಡ್ಲಿ ಮಾರಲು ಅವರು ಬಯಸುತ್ತಾರೆ.
