Breaking News

ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಗಣನೀಯ ಪ್ರಮಾಣದಲ್ಲಿ ಕುಸಿತ

Spread the love

ಮುಂಬೈ: ದೇಶದ ಆರ್ಥಿಕ ಕೇಂದ್ರ ಬಿಂದುವಾದಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಹಾಗು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಸೋಮವಾರ ಬೆಳಗ್ಗೆ ವ್ಯವಹಾರ ಆರಂಭವಾಗುತ್ತಿದ್ದಂತೆ ಭಾರಿ ಕುಸಿತ ಕಂಡಿತು. ಇದೇ ವೇಳೆ ರೂಪಾಯಿ ಮೌಲ್ಯವೂ ಸಾರ್ವಕಾಲಿಕವಾಗಿ ಕೆಳಗಿಳಿಯಿತು. ಶಾಂಘೈನಲ್ಲಿ ವಿಧಿಸಲಾಗಿರುವ ಕೋವಿಡ್‌-19 ಕಠಿಣ ನಿರ್ಬಂಧಗಳು ಚೀನಾದ ಆರ್ಥಿಕತೆಯ ಮೇಲೆ ತೀವ್ರ ಸ್ವರೂಪದಲ್ಲಿ ಪ್ರಭಾವ ಬೀರುವ ಆತಂಕದಿಂದ ಏಷ್ಯಾದ ಮಾರುಕಟ್ಟೆಗಳಲ್ಲಿ ಷೇರು ಮೌಲ್ಯ ಗಣನೀಯ ಕುಸಿದಿದೆ.
ಸದ್ಯ, ಎನ್‌ಎಸ್‌ಇ ನಿಫ್ಟಿ 50 ಇಂಡೆಕ್ಸ್‌ ಶೇ 1.34 ರಷ್ಟು ಅಥವಾ 218 ಅಂಕ ಕುಸಿದು 16,192ರಲ್ಲಿ ವ್ಯವಹಾರ ನಡೆಸುತ್ತಿದೆ. ಬಿಎಸ್‌ಇ ಸೆನ್ಸೆಕ್ಸ್‌ ಶೇ 1.24ರ ಅಥವಾ 732 ಅಂಕ ಕುಸಿದು 54,099 ರಲ್ಲಿ ವಹಿವಾಟು ನಡೆಸುತ್ತಿದೆ.ಯಾರಿಗೆ ನಷ್ಟ?: ನಿಫ್ಟಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಷೇರುಗಳು, ಲೋಹ, ಇಂಧನ ಉತ್ಪಾದಕ- ಮಾರಾಟ ಕಂಪನಿಗಳ ಷೇರುಗಳು ಶೇ 2ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕುಸಿದವು.ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಈಗ 77.42 ರಷ್ಟಿದೆ.


Spread the love

About Karnataka Junction

[ajax_load_more]

Check Also

ನೇಹಾ ಪ್ರಕರಣ ‌ಮಾಸುವ ಮುನ್ನ ಮತ್ತೊಂದು ಪ್ರಕರಣ ಬೆಳಕಿಗೆ: ಅನ್ಯಕೋಮುನ‌ ಯುವಕನಿಂದ ಯುವತಿ ಮೇಲೆ ಹಲ್ಲೆ…

Spread the loveಹುಬ್ಬಳ್ಳಿ :ನೇಹಾ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲು ಮತ್ತೊಂದು ಯುವತಿ ಮೇಲೆ ಕ್ಷುಲಕ ವಿಚಾರಕ್ಕೆ ಯುವಕನೊರ್ವ ಹಲ್ಲೆ …

Leave a Reply

error: Content is protected !!