ಹಳೆ ಹುಬ್ಬಳ್ಳಿಯ ದಿಡ್ಡಿ ಓಣಿ ಹನುಮಾನ, ಜಂಗ್ಲೀಪೇಟೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಭಜನೆ, ಭಕ್ತಿ ಗೀತೆಗಳು

Spread the love

ಹುಬ್ಬಳ್ಳಿ ಹೈಕೋರ್ಟ್, ಸುಪ್ರೀಂಕೋರ್ಟ್ ಆದೇಶವಿದ್ದರೂ ಆಜಾನ್​ ಹಾಗೂ ಧ್ವನಿವರ್ಧಕದ ವಿರುದ್ಧ ಸರ್ಕಾರ ಕ್ರಮಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಶ್ರೀ ರಾಮೇಸೇನೆ ಹಾಗೂ ವಿವಿಧ ಹಿಂದು ಪರ ಸಂಘಟನೆಯ ಮುಖಂಡರು ಸೋಮವಾರ ಬೆಳಗಿನ ಜಾವ ನಗರದ ದಿಡ್ಡಿ ಓಣಿಯ ಹಣಮಂತ ದೇವಸ್ಥಾನ ಸೇರಿದಂತೆ ಜಂಗ್ಲೇಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದ ಸೇರಿದಂತೆ ಮುಂತಾದ ದೇವಸ್ಥಾನದಲ್ಲಿ ಭಜನೆ, ಹನುಮಾನ್ ಚಾಲೀಸ್ ಹಾಗೂ ಸುಪ್ರಭಾತ್ ವನ್ನು
ಹಮ್ಮಿಕೊಳ್ಳಲಾಗಿತ್ತು.
ಶ್ರೀ ರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ
ಇದೇ 9ರ ಒಳಗೆ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನ ಕಾನೂನು ಬಾಹಿರ ಉಪಯೋಗಿಸಲಾಗುತ್ತದೆ ಇದಕ್ಕೆ ಯಾವುದೇ ಕ್ರಗೂಳ್ಳುತಿಲ್ಲ ಎಂದು ಗಡುವು ಸಹ ನೀಡಲಾಗಿತ್ತು. ಈಗ ಸರ್ಕಾರ ಧ್ವನಿವರ್ಧಕದ ವಿರುದ್ದ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮಂದಿರಗಳಲ್ಲಿ ಹಾಗೂ ಮಸೀದಿಗಳ ಎದುರು ಸೌಂಡ್​ ಬಾಕ್ಸ್​ಗಳ ಮೂಲಕ ಹನುಮಾನ್​ ಚಾಲೀಸ್ ಅಭಿಯಾನ ನಡೆಸಲಾಗುತ್ತದೆ.
ಮಸೀದಿಗಳ ಮೇಲೆ ಸ್ಪೀಕರ್​ ಗಳನ್ನು ಅಕ್ರಮವಾಗಿ ಬಳಕೆ ಮಾಡ್ತಿದ್ದಾರೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುತ್ತಿಲ್ಲ. ಮಸೀದಿಗಳ ಮೇಲಿನ ಧ್ವನಿವರ್ಧಕದ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರ ಮೀನಾಮೇಷ ಏಣಿಸುತ್ತಿದೆ ಎಂದು ಮುಖಂಡ ಅಣ್ಣಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟೇ ಕ್ಕೆ ಸರ್ಕಾರ ಎಚ್ಚತೇತ್ತುಕೊಳ್ಳದಿದ್ದರೆ
ಮಂದಿರಗಳಲ್ಲಿ ಹಾಗೂ ಮಸೀದಿಗಳ ಎದುರು ದೊಡ್ಡ-ದೊಡ್ಡ ಸೌಂಡ್​ ಬಾಕ್ಸ್​ಗಳ ಮೂಲಕ ಹನುಮಾನ್​ ಚಾಲೀಸ್ ಅಭಿಯಾನ ಮುಂದಿನ ದಿನಗಳಲ್ಲಿ ಮುಂದುವರಿಸುವ ಎಚ್ಚರಿಕೆಯನ್ನು ಹಿಂದು ಸಂಘಟನೆಯ ಕಾರ್ಯಕರ್ತರು ನೀಡಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಭದ್ರತೆಯನ್ನು ಮಾಡಲಾಗಿದೆ.


Spread the love

About gcsteam

    Check Also

    ಕೆಪಿಎಸ್ ಸಿಗೆ ಸುಧಾರಣೆ ಅಗತ್ಯವಾಗಿದೆ : ಶೆಟ್ಟರ್

    Spread the loveಹುಬ್ಬಳ್ಳಿ: ಹಗರಣಗಳು ಇಲ್ಲದೇ ಯಾವುದೇ ನೇಮಕಾತಿ ನಡೆಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಗಬ್ಬೆದ್ದು ಹೋಗಿರುವ …

    Leave a Reply