ಹುಬ್ಬಳ್ಳಿ; ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆ ಹೆಚ್ಚಾಗುತಿದ್ದು ಶಾಲಾ ಬೇಸಿಗೆ ರಜೆಯನ್ನು ವಿಸ್ತರಣೆ ಮಾಡಿ ಮುಂದುವರಿಸಬೇಕು ಎಂದು
ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ, ರಾಜ್ಯಾದ್ಯಕ್ಷರಾದ ಅಶೋಕ ಸಜ್ಜನ ಆಗ್ರಹ ಮಾಡಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಹೆಬಸೂರು ಗ್ರಾಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ,ಶಿಕ್ಷಣ ಸಚಿವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಎಲ್ಲಾ ಶಿಕ್ಷಕರನ್ನು ಪ್ರತಿನಿಧಿಸುವ ಶಿಕ್ಷಕ ಪ್ರತಿನಿಧಿಸುವ ಪ್ರತಿನಿಧಿಗಳಲ್ಲಿ ನಮ್ಮ ಕಳಕಳಿ ಮನವಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ದಿನಾಂಕ :16-05-2022 ರಿಂದ ಶಾಲೆಗಳನ್ನು ಪ್ರಾರಂಭಕ್ಕೆ ಶಿಕ್ಷಣ ಸಚಿವರು ಆದೇಶ ಹೊರಡಿಸಿದ್ದಾರೆ.ಆದರೆ ಈ ದಿಸೆಯಲ್ಲಿ ವಿವಿಧ ಶಿಕ್ಷಕರ ಸಂಘಟನೆಗಳು ವಿವಿಧ ಜನ ನಾಯಕರು ಸರಕಾರಕ್ಕೆ ಹಾಗೂ ಶಿಕ್ಷಣ ಸಚಿವರಿಗೆ ಲಿಖಿತ ರೂಪದಲ್ಲಿ ಸಹ ಬೇಸಿಗೆ ರಜೆಯನ್ನು ಮುಂದುವರಿಸಬೇಕೆಂದು ಮನವಿ ಸಲ್ಲಿಸಿರುತ್ತಾರೆ.
ಶಿಕ್ಷಣ ಸಚಿವರೇ ತಾವುಗಳು ಶಾಲೆಗಳನ್ನು ಪ್ರಾರಂಭಿಸುವುದನ್ನ, ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಸ್ವಾಗತಿಸುತ್ತೇವೆ.ಆದರೆ ತಾವುಗಳು ಇಂತಹ ಬಿಸಿಲಿನ ತಾಪಮಾನ ಇರುವ ಸಂದರ್ಭದಲ್ಲಿ , ವಿಪರೀತವಾಗಿ ಸುರಿಯುತ್ತಿರುವ ಮಳೆಯ ಸಂದರ್ಭದಲ್ಲಿ ಶಾಲೆಗಳನ್ನು ಪ್ರಾರಂಭಿಸಬೇಕಾಗುವ ಮೊದಲು ಶಿಕ್ಷಣ ತಜ್ಞರ ಹಾಗೂ ಮಕ್ಕಳ ತಜ್ಞರ ವರದಿಯನ್ನು ಪಡೆದು ಶಾಲೆಗಳನ್ನು ಪ್ರಾರಂಭಿಸಬೇಕು.
ರಾಜ್ಯದ ಮೂಲೆ ಮೂಲೆಗಳಲ್ಲಿರುವ ಗ್ರಾಮೀಣ ಪ್ರದೇಶದ ಶಾಲೆಗಳ ಕಟ್ಟಡಗಳು ಶಿಥಿಲಗೊಂಡಿದ್ದು ಶೀಟ್ ಹೊಂದಿರುವ ಶಾಲಾ ಕಟ್ಟಡಗಳು ವಿವಿಧ ರೂಪದ ಶಾಲಾ ಕಟ್ಟಡಗಳು ಗಾಳಿ-ಮಳೆಗೆ ಶಿಥಿಲಗೊಂಡಿದ್ದು ಅವುಗಳು ದುರಸ್ತಿ ಇಲ್ಲದೆ ಅಪಾಯಕಾರಿ ಹಂತದಲ್ಲಿದೆ ಹಾಗೂ ಆ ಕಟ್ಟಡಗಳಲ್ಲಿ ವಿಷಜಂತುಗಳು ಸೇರಿಕೊಂಡಿರಬಹುದು.ಕಾರಣ
ಕಂದಾಯ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಶಾಲಾ ಕಟ್ಟಡಗಳನ್ನು ಪರಿಶೀಲನೆ ಮಾಡಿಸಿ ದುರಸ್ತಿ ಮಾಡಿಸಿ ಸುಸಜ್ಜಿತ ಕಟ್ಟಡ ಎಂದು ಪ್ರಮಾಣ ಪತ್ರ ಪಡೆಯುವುದರ ಮೂಲಕ ಶಾಲಾ ಪ್ರಾರಂಭಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ .
Check Also
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ
Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …