ಬೆಂಗಳೂರು : ರಾಜಧಾನಿಯ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಕೆಲಸದ ಅವಧಿಯಲ್ಲಿ ನಿದ್ರಾ ವಿರಾಮ ಘೋಷಿಸಿದೆ. ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಈ ವಿನೂತನ ಯೋಜನೆಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿದೆ. ಕೋರಮಂಗಲ ಮೂಲದ ಸ್ಟಾರ್ಟ್ ಅಪ್ ವೇಕ್ ಫಿಟ್ ಸಲ್ಯೂಷನ್ ಕರ್ತವ್ಯದ ಅವಧಿಯಲ್ಲಿ ಉದ್ಯೋಗಿಗಳಿಗೆ 30 ನಿಮಿಷದ ನಿದ್ರಾ ವಿರಾಮ ನೀಡಿ ಅಧಿಕೃತ ಘೋಷಣೆ ಮಾಡಿದೆ.
ವೇಕ್ ಫಿಟ್ ಸಲ್ಯೂಷನ್‍ನ ಸಹಸಂಸ್ಥಾಪಕ ಚೈತನ್ಯ ರಾಮಲಿಂಗೇ ಗೌಡ ಇತ್ತೀಚೆಗೆ ಸಹೋದ್ಯೋಗಿಗಳಿಗೆ ಇಮೇಲ್ ಮಾಡಿ ಮಧ್ಯಾಹ್ನ 2ರಿಂದ 2.30ರ ನಡುವೆ ಉದ್ಯೋಗಿಗಳು ನಿದ್ದೆ ಮಾಡಬಹುದು ಎಂದು ತಿಳಿಸಿದ್ದರು.