Breaking News

ಇಂದೋರ್ ಭೀಕರ ಬೆಂಕಿ ಅವಘಡದ ಹಿಂದೆ ಲವ್ ಫೈಲ್ಯೂರ್ ಸ್ಟೋರಿ

Spread the love

ಇಂದೋರ್- ಮಹಿಳೆಯೊಬ್ಬಳು ತನ್ನ ಪ್ರೀತಿ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿಮೂರು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಇಟ್ಟ ಘಟನೆ ಮಧ್ಯಪ್ರದೇಶದ ಇಂದೋರ್ ನಗರದ ವಿಜಯ ನಗರದಲ್ಲಿ ನಡೆದಿದೆ. ಈ ಭೀಕರ ಅವಘಡದಲ್ಲಿ 7 ಮೃತಪಟ್ಟಿದ್ದಾರೆ. ಈ ಸಂಬಂಧ 27 ವರ್ಷದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ತನ್ನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದ ಕಾರಣಕ್ಕೆ ಮಹಿಳೆ ಮೇಲೆ ಕೋಪಗೊಂಡಿದ್ದ ಶುಭಂ ದೀಕ್ಷಿತ್ ಎಂಬಾತ, ಆಕೆಗೆ ಸೇರಿದ್ದ ವಾಹನಕ್ಕೆ ಬೆಂಕಿ ಹಚ್ಚಿದ್ದ ಕಟ್ಟಡದ ಪಾರ್ಕಿಂಗ್ ಸ್ಥಳದಲ್ಲಿದ್ದ ವಾಹನಕ್ಕೆ ಬೆಂಕಿ ಇಟ್ಟಿದ್ದ ಎಂದು ಪೊಲೀಸರು ಅನುಮಾನಿಸಿದ್ದಾರೆ. ಈ ಬೆಂಕಿಯ ಜ್ವಾಲೆಗಳು ಇಡೀ ಕಟ್ಟಡವನ್ನು ಆವರಿಸಿದೆ. ಯಾವುದೇ ಸಂಬಂಧವಿರದ ಏಳು ಮುಗ್ಧ ಜೀವಿಗಳನ್ನು ಬಲಿಪಡೆದುಕೊಂಡಿದೆ. ದೀಕ್ಷಿತ್ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ನೆಲಮಾಳಿಗೆಯಲ್ಲಿ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಹೊತ್ತುಕೊಂಡಿತ್ತು ಎಂದು ಈ ಮೊದಲು ಪೊಲೀಸರು ಹೇಳಿದ್ದರು. ಎಲೆಕ್ಟ್ರಿಕ್ ಮೀಟರ್‌ನಲ್ಲಿ ಶಾರ್ಟ್ ಸರ್ಕೀಟ್ ಉಂಟಾಗಿ ಹೊತ್ತಿಕೊಂಡ ಬೆಂಕಿ, ವಾಹನಗಳಿಗೆ ಆವರಿಸಿತ್ತು. ಬಹುಬೇಗನೆ ಇಡೀ ಕಟ್ಟಡಕ್ಕೂ ಹೊತ್ತುಕೊಂಡಿದೆ ಎಂದು ವಿಜಯ ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ತೆಹಜೀಬ್ ಖಾಜಿ ತಿಳಿಸಿದ್ದರು.
ಎಲ್ಲ ದಿಕ್ಕುಗಳಿಂದಲೂ ಬೆಂಕಿ ಆವರಿಸಿದ್ದರಿಂದ ಕೆಲವು ನಿವಾಸಿಗಳು ತಮ್ಮ ಫ್ಲಾಟ್‌ನ ಬಾಲ್ಕನಿ ಮತ್ತು ಟೆರೇಸ್‌ಗಳಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಅವರಲ್ಲಿ 9 ಮಂದಿಗೆ ಗಾಯಗಳಾಗಿವೆ. ಮೂರು ಮಹಡಿ ಕಟ್ಟಡದಲ್ಲಿನ ಹಲವು ಫ್ಲಾಟ್‌ಗಳಲ್ಲಿ ಜನರು ವಾಸಿಸುತ್ತಿದ್ದರು. ಬೆಂಕಿ ಹೊತ್ತಿಕೊಂಡಾಗ ನೆಲ ಮಹಡಿಯಲ್ಲಿದ್ದ ಕಟ್ಟಡದ ಮುಖ್ಯ ದ್ವಾರ ಮತ್ತು ಮೆಟ್ಟಿಲುಗಳಲ್ಲಿ ಭಾರಿ ಜ್ವಾಲೆ ಹಾಗೂ ಕಪ್ಪು ಹೊಗೆ ಆವರಿಸಿತ್ತು. ಮೂರನೇ ಮಹಡಿಯಲ್ಲಿ ಮೇಲ್ಭಾಗಕ್ಕೆ ಹೋಗುವ ಇದ್ದ ದ್ವಾರದ ಬಾಗಿಲು ಬಹಳ ಬಿಸಿಯಾಗಿ ಸುಡುತ್ತಿತ್ತು. ಇದರಿಂದ ಅನೇಕರು ಕಟ್ಟಡದ ಒಳಗೇ ಸಿಲುಕಿಕೊಂಡಿದ್ದರು ಎಂದು ಡಿಸಿಪಿ ಸಂಪತ್ ಉಪಾಧ್ಯಾಯ ತಿಳಿಸಿದ್ದಾರೆ.
ಅಗ್ನಿಶಾಮಕದ ಸಿಬ್ಬಂದಿ ಬಹಳ ತಡವಾಗಿ ಸ್ಥಳಕ್ಕೆ ಆಗಮಿಸಿದ್ದರು. ಒಂದು ವೇಳೆ ಅವರು ಸರಿಯಾದ ಸಮಯಕ್ಕೆ ಬಂದಿದ್ದರೆ ಅನೇಕರ ಜೀವಗಳನ್ನು ಉಳಿಸಬಹುದಾಗಿತ್ತು. ಕೆಲವು ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿದ್ದವು ಎಂದು ಪ್ರತ್ಯಕ್ಷದರ್ಶಿ ಅಕ್ಷಯ್ ಸೋಲಂಕಿ ತಿಳಿಸಿದ್ದಾರೆ.
ಈ ಕಟ್ಟಡದಲ್ಲಿ ವಾಸವಿದ್ದ ಮಹಿಳೆಯನ್ನು ಶುಭಂ ಪ್ರೀತಿಸುತ್ತಿದ್ದ. ಆದರೆ ಆಕೆ ಬೇರೊಬ್ಬರ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಶೀಘ್ರದಲ್ಲಿಯೇ ಆಕೆಯ ಮದುವೆ ನಡೆಯುವುದರಲ್ಲಿತ್ತು. ಆಕೆಯನ್ನು ಸಾಯಿವುದಕ್ಕಾಗಿ ಶುಭಂ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಮಹಿಳೆ ಬದುಕುಳಿದಿದ್ದಾರೆ. ಆದರೆ, ಇದಕ್ಕೆ ಸಂಬಂಧವೇ ಇರದ ಏಳು ಮಂದಿ ಜೀವ ಕಳೆದುಕೊಂಡಿದ್ದಾರೆ.


Spread the love

About Karnataka Junction

    Check Also

    ಗಾಂಜಾ ಮಾರುತ್ತಿದ್ದ 12 ಆರೋಪಿಗಳು ಬಂಧನ*. ಕಾರು, ಎರಡು ತಲ್ವಾರ್, ಡ್ರ್ಯಾಗರ್, 10 ಮೊಬೈಲ್ ಪೋನ್‌ಗಳು ವಶ. ಎನ್ ಶಶಿಕುಮಾರ್.

    Spread the loveಹುಬ್ಬಳ್ಳಿ: ಇಂದು ನಗರದಲ್ಲಿ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಗಾಂಜಾ ಮಾರಾಟ ಮಾಡುವ …

    Leave a Reply

    error: Content is protected !!