https://youtu.be/g8DeMUYRVn0
ಹುಬ್ಬಳ್ಳಿ; ಮಹಾಮಾರಿ ಕೋವೀಡ್ -19 ತಂದ ಕಷ್ಟ ಅಸ್ಟಿಸ್ಟಲ್ಲ. ಈ ನಡುವೆ ಬಡವರಿಗೆ, ನಿರ್ಗತಿಕರಿಗೆ ಅಸಹಾಯಕರಿಗೆ ಜೊತೆಗೆ ರೈತಾಪಿ ವರ್ಗಕ್ಕೆ ತಮ್ಮದೇ ಆದ ರೀತಿಯಲ್ಲಿ ಸಹಾಯ ಹಸ್ತ ಚಾಚುತಿದ್ದಾರೆ ರಾಯಾಪುರದ ಯುವ ರೈತ ಸಿದ್ದಾರೂಢ ಶಿಸನಹಳ್ಳಿ ಮತ್ತು ಅವರ ಕುಟುಂಬ ಸದಸ್ಯರು.
ಸಾಕಷ್ಟು ಕೋವೀಡ್ ಪ್ರಕರಣ ತಗ್ಗಿಸಲು ಸರ್ಕಾರ ಹಾಗೂ ಧಾರವಾಡ ಜಿಲ್ಲಾಡಳಿತ ಹಗಲಿರುಳು ಎನ್ನದೇ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಸಹ ಸಾರ್ವಜನಿಕರ ಸಹಭಾಗಿತ್ವ ಮುಖ್ಯವಾಗಿದೆ. ಇದಕ್ಕೆ ಹೆಗಲು ಕೊಟ್ಡವರು ಈ ಯುವ ರೈತ ಸಿದ್ದಾರೂಢ.
ಜನರು ತರಕಾರಿಗಳಿಗಾಗಿ ಜನರು ಮಾರುಕಟ್ಟೆಗೆ ಮುಗಿ ಬೀಳುವುದನ್ನು ತಪ್ಪಿಸಲು ಹಾಗೂ ಒಂದು ಕಡೆ ರೈತರು ಬೆಳೆದ ಬೆಳೆ ಹಾಳಾಗದಂತೆ ತಡೆಗಟ್ಟುವ ಸಲುವಾಗಿ ಜೊತೆಗೆ ದಲ್ಲಾಳಿಗಳ ಹಾವಳಿಂದ ಬಡವರ ಸಂಕಷ್ಟಕ್ಕೆ ಆಸರಡಯಾಗುವ ಸದುದ್ದೇಶದಿಂದ ಮನೆ ಬಾಗಿಲಿಗೆ ತರಕಾರಿ ತಲುಪಿಸುವ ವ್ಯವಸ್ಥೆ ಮಾಡುತಿದ್ದಾರೆ.
ಹುಬ್ಬಳ್ಳಿ ಅಮರಗೋಳದ ಶ್ರೀ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿನ ತರಕಾರಿ ಜೊತೆಗೆ ತಮ್ಮ ಹೊಲದಲ್ಲಿ ಬೆಳೆದ ತರಕಾರಿ ಸಹ ಸಂಗ್ರಹಿಸಿ ರಾಯಾಪುರದ ಮನೆ ಮನೆಗೆ ಪೌಷ್ಟಿಕ ಹಾಗೂ ಸ್ವಚ್ಚವಾದ ತರಕಾರಿ ಮುಟ್ಟಿಸುತಿದ್ದಾರೆ. ಇಲ್ಲಿ
ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ತರಕಾರಿ ಪೂರೈಕೆ ಮಾಡುವುದು ಸಹ ದೊಡ್ಡ ಚಾಲಿಂಗ್ ವಿಷಯ. ಈ ನಡುವೆ ಸರ್ಕಾರ ಹಾಗೂ ಅಧಿಕಾರಿ ಶಾಹಿ ವರ್ಗ ಮಾಡದ ಕಾರ್ಯ ಇವರು ಮಾಡುತಿದ್ದಾರೆ.
ಕೊರೋನಾ ವೈರಸ್‌ನಿಂದಾಗಿ ಲಾಕ್‌ಡೌನ್ ಇದ್ದುದರಿಂದ ತರಕಾರಿ ಮಾರುವವರು ಇದನ್ನೆ ಬಂಡವಾಳವಾಗಿಸಿಕೊಂಡು ಅಧಿಕ ಬೆಲೆಗೆ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ.
ಇದನ್ನೇ ಕೇಲವರು ಬಂಡವಾಳ ಮಾಡಿಕೊಂಡು ಹಗಲು ದರೋಡೆ ಸಹ ಇಳಿದಿದ್ದಾರೆ.
ಅದನ್ನು ತಪ್ಪಿಸಲು ಇದೊಂದು ಒಳ್ಳೆಯ ಕೆಲಸ.
ಇನ್ನೂ ಬಡವರು ಸಹ ತರಕಾರಿ ಕೊಂಡುಕೊಳ್ಳುವ ಸ್ಥಿತಿ ಸಹ ಇಲ್ಲಂದತಾಗಿದೆ. ಈ ನಿಟ್ಟಿನಲ್ಲಿ ರೈತರು ಬೆಳೆದ ತರಕಾರಿಯನ್ನೇ ರೈತ ಖರೀದಿ ಮಾಡಿ ವಿತರಣೆ ಮಾಡುತ್ತಿರುವುದು ಸ್ವಾಗತಾರ್ಹ.
ಸಿದ್ದಾರೂಢ ಶಿಸನಹಳ್ಳಿ ಮತ್ತು ಅವರ ಕುಟುಂಬದವರು ಒಂದು ವಾರದಿಂದ ಹಗಲಿರುಳು ಎನ್ನದೇ ಮನೆ ಮನೆಗೆ ಹೋಗಿ
ಸಾಮಾಜಿಕ ಅಂತರ ಕಾಯ್ದುಕೊಂಡು ತರಕಾರಿ ವಿತರಿಸುತಿದ್ದಾರೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ನೂಕು-ನುಗ್ಗಲಿಲ್ಲದೇ ತರಕಾರಿ ತೆಗೆದುಕೊಳ್ಳುತಿದ್ದಾರೆ.
ಇಂದು ಲಾಕ್ ಡೌನ್ ದಿಂದಾಗಿ ರೈತರು, ಬಡ ಜನರು ಬಹಳಷ್ಟು ತೊಂದರೆಯಲ್ಲಿದ್ದಾರೆ. ಇದನ್ನು ಅರಿತ ನಾನು ಒಂದು ಕಡೆ ರೈತರ ತರಕಾರಿ ಕೊಂಡುಕೊಂಡು ಅದೇ ತರಕಾರಿಯನ್ನು ಬಡ ರೈತರು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಅವರ ಮನೆ ಮನೆಗೆ ಹೋಗಿ ತಲುಸಲಾಗುತ್ತದೆ.ಇದೊಂದು ಅಳಿಲು ಸೇವೆ ಅಷ್ಟೇ.
ಸಿದ್ದಾರೂಢ ಶಿಸನಹಳ್ಳಿ, ಯುವ ರೈತ
ಬಹಳಷ್ಟು ಕಷ್ಟದಲ್ಲಿರುವ ಜನರಿಗೆ ಒಂದು ಹುಲ್ಲು ಕಡ್ಡಿ ಸಹ ಆಸರೆ. ಇಂತಹ ಸ್ಥಿತಿಯಲ್ಲಿ ಮನೆ ಮನೆಗೆ ತರಕಾರಿ ಮುಟ್ಟಿಸುವ ಕಾರ್ಯ ಒಳ್ಳೆಯದು. ಇದು ಕೋವೀಡ್ ಸಮಯದಲ್ಲಿ ಇದೊಂದು ಆಶಾದಾಯಕ ಬೆಳೆವಣಿಗೆ.
ಬಸವರಾಜ ಚಿಕ್ಕಣ್ಣವರ , ಹುಧಾ ಪಾಲಿಕೆ ಮಾಜಿ ಸದಸ್ಯರು