ಹುಬ್ಬಳ್ಳಿ;ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ, ರಾಜ್ಯಾದ್ಯಕ್ಷರಾದ ಅಶೋಕ ಸಜ್ಜನ ಅವರ ನೇತ್ರತ್ವದಲ್ಲಿ, ಸಕ್ಕರೆ, ಜವಳಿ ಹಾಗೂ ಕೈಮಗ್ಗ ಮತ್ತು ರಾಯಚೂರು, ಬೀದರ ಜಿಲ್ಲೆಯ ಉಸ್ತುವಾರಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರ ಮೂಲಕ, ಶಿಕ್ಷಕರಿಗೆ ಬೇಸಿಗೆ ರಜೆಯನ್ನು ಜೂನ್ ೧ ರ ವರೆಗೆ ಮುಂದುವರೆಸಲು ಹಾಗೂ ಓಪಿಎಸ್.ಓಟಿಎಸ್.ಇನ್ನಿತರ ಪ್ರಸ್ತುತ ಬೇಡಿಕೆಗಳ ಕುರಿತು ಮುಖ್ಯ ಮಂತ್ರಿಗಳಿಗೆ ಶಿಕ್ಷಣ ಸಚಿವರಿಗೆ ಶಿಫಾರಸ್ಸು ಮಾಡಲು ಮನವಿ ಸಲ್ಲಿಸಲಾಯಿತು. ಶಿಕ್ಷಕರ ಸಂಘದ ಪದಾಧಿಕಾರಿಗಳಾದ
ಎಲ್ ಐ ಲಕ್ಕಮ್ಮನವರ, ನವಲಗುಂದ ತಾಲೂಕಿನ ಅದ್ಯಕ್ಷರಾದ ಎಸ್ ಸಿ ಹೊಳೆಯಣ್ಣವರ, ಸಲಹಾ ಸಮಿತಿಯ ಗೋವಿಂದ ಜುಜಾರೆ ಡಿ.ಟಿ ಬಂಡಿವಡ್ಡರ್ ಇದ್ದರು.
