ನವದೆಹಲಿ : ಕೇಂದ್ರ ಸರ್ಕಾರ ದೇಶದಲ್ಲಿನ ಡ್ರೈವಿಂಗ್ ಲೈಸೆನ್ಸ್ ಪಡೆಯುವ ನೀತಿಯನ್ನು ಸರಳೀಕೃತಗೊಳಿಸಿದೆ. ಇದರಿಂದ ಹೊಸದಾಗಿ ಡ್ರೈವಿಂಗ್ ಲಸೆನ್ಸ್ ಪಡೆಯುವವರು, ಹಳೆ ಲೆಸೆನ್ಸ್ ನವೀಕರಿಸುವವರೂ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ.
ರಾಜ್ಯ ಅಥವಾ ಕೇಂದ್ರ ಸರ್ಕಾರದ ಅಧೀನದಲ್ಲಿ ಖಾಸಗಿ ಡ್ರೈವಿಂಗ್ ಕೇಂದ್ರ ರಾಜ್ಯ ಅಥವಾ ಕೇಂದ್ರ ಸರ್ಕಾರದ ಸಾರಿಗೆ ಪ್ರಾಧಿಕಾರದ ಅಡಿಯಲ್ಲಿ ಖಾಸಗಿ ಡ್ರೈವಿಂಗ್ ಕೇಂದ್ರಗಳು ಇರಲಿದೆ. ಈ ಕೇಂದ್ರಗಳು ಡ್ರೈವಿಂಗ್ ಲೆಸೆನ್ಸ್ ವಿಚಾರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಈ ಕೇಂದ್ರಗಳ ಅವಧಿ ಕೇವಲ 5 ವರ್ಷ ಮಾತ್ರ, ಬಳಿಕ ಪರವಾನಗಿಯನ್ನು ನವೀಕರಣ ಮಾಡಬೇಕು.
ಆರ್‌ಟಿಒ ಮುಂದೆ ಡ್ರೈವಿಂಗ್ ಟೆಸ್ಟ್ ಬೇಕಿಲ್ಲ. ಸದ್ಯ ಡ್ರೈವಿಂಗ್ ಸ್ಕೂಲ್ ಮೂಲಕ ಅಥವಾ ವೈಯುಕ್ತಿಕವಾಗಿ ಲೈಸೆನ್ಸ್‌ಗೆ ಅರ್ಜಿ ಹಾಕಿದರೆ, ಆರ್‌ಟಿಒ ಅಧಿಕಾರಗಳ ಮುಂದೆ ಡ್ರೈವಿಂಗ್ ಟೆಸ್ಟ್ ಮಾಡಬೇಕು. ಈ ಟೆಸ್ಟ್‌ನಲ್ಲಿ ಪಾಸ್ ಆದವರಿಗೆ ಮಾತ್ರ ಲೈಸೆನ್ಸ್ ನೀಡಲಾಗುತ್ತದೆ. ಆದರೆ ಹೊಸ ನಿಯಮದಡಿಯಲ್ಲಿ ಆರ್‌ಟಿಒ ಮುಂದೆ ಡ್ರೈವಿಂಗ್ ಟೆಸ್ಟ್ ನೀಡಬೇಕಾದ ಅಗತ್ಯವಿಲ್ಲ. ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಡ್ರೈವಿಂಗ್ ಕೇಂದ್ರಗಳಲ್ಲಿ ಡ್ರೈವಿಂಗ್ ಪಾಸ್ ಮಾಡಿದರೆ ಸಾಕು. ಈ ಕೇಂದ್ರಗಳು ನೀಡುವ ಡ್ರೈವಿಂಗ್ ಸರ್ಟಿಫೀಕೆಟ್ ಆಧಾರದಲ್ಲಿ ಸಾರಿಗೆ ಪ್ರಾಧಿಕಾರದಿಂದ ಲೈಸೆನ್ಸ್ ಪಡೆಯಬಹುದು.