ಧಾರವಾಡ ನಗರದ ವಿವಿಧ ದೇವಸ್ಥಾನಗಳಿಗೆ ಮಂಗಳವಾರ ಭೇಟಿ ನೀಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಮೇ.9 ನೇ ತಾರೀಖಿನಿಂದ ಬೆಳಿಗ್ಗೆ 5 ಗಂಟೆಗೆ ದೇವಸ್ಥಾನದಲ್ಲಿ ಸುಪ್ರಭಾತ ಹಾಗೂ ಓಂಕಾರ ಮೊಳಗಿಸುವಂತೆ ದೇವಸ್ಥಾನದ ಕಮಿಟಿಯವರಿಗೆ ಹಾಗೂ ಅರ್ಚಕರಿಗೆ ಮನವಿ ಸಲ್ಲಿಸಿದ್ದಾರೆ. ಮಸೀದಿಗಳ ಮೇಲೆ ಇರುವ ಧ್ವನಿ ವರ್ಧಕಗಳಿಂದ ಬರುವ ಶಬ್ದವನ್ನು ನಿಯಂತ್ರಿಸುವಂತೆ ಮುತಾಲಿಕ್ ಅವರು ಈ ಹಿಂದೆಯೇ ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ಇಂತಿಷ್ಟೆ ಶಬ್ದ ಇರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದ್ದರೂ ಮಸೀದಿಗಳು ಅದನ್ನು ಉಲ್ಲಂಘಿಸುತ್ತಿವೆ. ಹೀಗಾಗಿ ಹಿಂದೂ ದೇವಾಲಯಗಳಲ್ಲೂ ಸುಪ್ರಭಾತ ಹಾಗೂ ಓಂಕಾರ ನಾದ ಮೊಳಗಿಸುವಂತೆ ಅಭಿಯಾನವನ್ನು ಆರಂಭಿಸಿದ್ದಾರೆ. ಧಾರವಾಡದ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಮುತಾಲಿಕ್, ಮೇ.9 ರಿಂದ ಬೆಳಿಗ್ಗೆ 5 ಗಂಟೆಯಿಂದಲೇ ಸುಪ್ರಭಾತ ಹಾಕುವಂತೆ ಮನವಿ ಮಾಡಿದ್ದಾರೆ…ಧಾರವಾಡದ ದತ್ತಾತ್ರೇಯ ದೇವಸ್ಥಾನ, ಲೈನ್ ಬಜಾರ್ ಆಂಜನೇಯ ದೇವಸ್ಥಾನ, ಶಿವಾಲಯ, ಲಕ್ಷ್ಮೀನಾರಾಯಣ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನಗಳಿಗೆ ತೆರಳಿದ ಮುತಾಲಿಕ್ ಅವರು ಧ್ವನಿವರ್ಧಕಗಳಿಂದ ಓಂಕಾರ ನಾದ ಮೊಳಗುವಂತೆ ಮಾಡಬೇಕು ಎಂದು ಮನವಿ ಮಾಡಿದರು
ತಾರಕಕ್ಕೆ ಏರಿದ ಅಜಾನ್ ಮತ್ತು ಸುಪ್ರಭಾತ; ಇಡೀ ರಾಜ್ಯದಲ್ಲಿಯೇ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದು ಆಜಾನ್ ಹಾಕುವುದು.ಇದರಿಂದಾಗಿ ಸುಪ್ರಭಾತ ಮೊಳಗಿಸುವಂತೆ ಇನ್ನೊಂದು ಕಡೆ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಾಕೀತು ಮಾಡಿದ್ದಾರೆ. ಇದು ಸಹ ಇನ್ನಷ್ಟು ವಿವಾದಕ್ಕೆ ಕಾರಣವಾಗಬಹುದು.
