Breaking News

ಗ್ರೀನ್ ಕಾರ್ಡ್‌ ಬಯಸುವವರು ಮತ್ತು ಪತಿ-ಪತ್ನಿಯ ಎಚ್​​-1ಬಿ ವೀಸಾ ಸೇರಿ ಕೆಲ ವಲಸಿಗರಿಗೆ ಕೆಲಸದ ಪರವಾನಗಿ ಒಂದೂವರೆ ತಿಂಗಳು ವಿಸ್ತರಣೆ

Spread the love

ಅಮೆರಿಕ: ನಾನಾ ಕಾರಣಗಳಿಂದ
ವಲಸಿಗರ ವೀಸಾದ ಕಾಲಾವಧಿಯನ್ನು ಅಮೆರಿಕ ಸರ್ಕಾರ ವಿಸ್ತರಿಸಿದೆ. ಗ್ರೀನ್ ಕಾರ್ಡ್‌ಗಳನ್ನು ಬಯಸುವವರು ಮತ್ತು ಪತಿ-ಪತ್ನಿಯ ಎಚ್​​-1ಬಿ ವೀಸಾ ಸೇರಿ ಕೆಲ ವಲಸಿಗರಿಗೆ ಕೆಲಸದ ಪರವಾನಗಿಯನ್ನು ಹೆಚ್ಚುವರಿ 18 ತಿಂಗಳವರೆಗೆ ಬಳಸಲು ಅನುಮತಿಸಲಾಗಿದೆ. ಇದರಿಂದ ಅಮೆರಿಕದಲ್ಲಿ ಕೆಲಸ ಮಾಡುವ ಸಾವಿರಾರು ಭಾರತೀಯರಿಗೆ ಅನುಕೂಲವಾಗಿದೆ.
ಗ್ರೀನ್ ಕಾರ್ಡ್ ಅಂದರೆ ಅಧಿಕೃತವಾಗಿ ಅನುಮತಿ ವಾಸದ ಕಾರ್ಡ್​​ ಎಂದೇ ಕರೆಯಲ್ಪಡುತ್ತದೆ. ಇದು ವಲಸಿಗರಿಗೆ ನೀಡಲಾದ ದಾಖಲೆಯಾಗಿದ್ದು, ಅಮೆರಿಕದಲ್ಲಿ ಶಾಶ್ವತವಾಗಿ ವಾಸಿಸುವ ಸವಲತ್ತು ನೀಡಲಾಗಿದೆ ಎಂಬುದಕ್ಕೆ ಇದು ಒಂದು ಸಾಕ್ಷಿ ಅಥವಾ ದಾಖಲೆಯಾಗಿದೆ. ಜೋ ಬೈಡನ್ ಸರ್ಕಾರದ ಈ ಘೋಷಣೆಯ ಮೇ 4 ರಿಂದ ಜಾರಿಗೆ ಬಂದಿದೆ. ಹೆಚ್ಚುವರಿ ಈ 180 ದಿನಗಳೊಂದಿಗೆ ಈ ಕಾರ್ಡ್​​ಗಳ ಅವಧಿ 540 ದಿನಗಳಿಗೆ ಸ್ವಯಂಪ್ರೇರಿತವಾಗಿ ವಿಸ್ತರಣೆಯಾಗಲಿದೆ ಎಂದು ಗೃಹ ಭದ್ರತೆ ಇಲಾಖೆ ಹೇಳಿದೆ.ಅಮೆರಿಕದ ಈ ಕ್ರಮದಿಂದ ಸುಮಾರು 87,000 ವಲಸಿಗರಿಗೆ ತಕ್ಷಣಕ್ಕೆ ಅನುಕೂಲವಾಗಿದೆ. 30 ದಿನಗಳಲ್ಲಿ ಕಾರ್ಡ್​​​ ಅವಧಿ ಮುಗಿಯುವುದು ತಪ್ಪಲಿದೆ. ಅಲ್ಲದೇ, ಒಟ್ಟಾರೆಯಾಗಿ 4.20 ಲಕ್ಷ ಜನರಿಗೆ ಇದರಿಂದ ಸಹಾಯವಾಗಲಿದೆ. ಈ ದೊಡ್ಡ ಸಂಖ್ಯೆಯ ಜನರಿಗೆ ಕೆಲಸದ ಪರವಾನಗಿ ನವೀಕರಿಸಲು ಸಾಧ್ಯವಾಗಲಿದೆ.


Spread the love

About Karnataka Junction

    Check Also

    ಐಆರ್‌ಬಿ ಸ್ಥಾಪಿಸುವ ಪ್ರಸ್ತಾಪ ಪುನರ ಪರಿಶೀಲಿಸಲು ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಆಗ್ರಹ

    Spread the loveಐಆರ್‌ಬಿ ಸ್ಥಾಪಿಸುವ ಪ್ರಸ್ತಾಪ ಪುನರ ಪರಿಶೀಲಿಸಲು ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಆಗ್ರಹ ಹುಬ್ಬಳ್ಳಿ …

    Leave a Reply

    error: Content is protected !!