ಪಿಎಸ್ಐ ನೌಕರಿಗಾಗಿ ಹಲವರು ಹಲವು ರೀತಿಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಮರು ಪರೀಕ್ಷೆಯ ಕಾರಣ, ನಿಯತ್ತಾಗಿ ಪರೀಕ್ಷೆ ಬರೆದು ಆಯ್ಕೆಯಾದ ಅಭ್ಯರ್ಥಿಗಳು ಒಂದೆಡೆ ಕಣ್ಣೀರು ಸುರಿಸುತ್ತಿದ್ದಾರೆ. ಇನ್ನೊಂದೆಡೆ ಹಣ ಕೊಟ್ಟು ಆಯ್ಕೆಯದವರು ಹಣವೂ ಹೋಯ್ತು ನೌಕರಿಯೂ ಹೋಯ್ತು ಅಂತ ಕಣ್ಣಿರು ಸುರಿಸುತ್ತಿದ್ದಾರೆ. ಅಂತವರ ಸಾಲಿನಲ್ಲಿ ಬಹಳಷ್ಟು ಜನ ಸೇರಿದ್ದಾರೆ.
ನನ್ನ ಮಗ ಒಳ್ಳೆ ನೌಕರಿಯಲ್ಲಿರಬೇಕು ಎಂದು ಎಲ್ಲಾ ಅಪ್ಪ-ಅಮ್ಮ ಬಯಸೋದು ಸಾಮಾನ್ಯವೇ. ಆದ್ರೆ ಅದಕ್ಕಾಗಿ ಮಗನಿಗೆ ಓದಲು ಉತ್ತಮ ವಾತಾವರಣ ಕಲ್ಪಿಸುವುದು ಬಿಟ್ಟು ಅಡ್ಡ ದಾರಿ ಹಿಡಿದು ಹೋದ್ರೆ ಏನಾಗುತ್ತೇ ಎನ್ನುವುದಕ್ಕೆ ಈ ಪಿಎಸ್ಐ ಅಕ್ರಮವೇ ಜೀವಂತ ಸಾಕ್ಷಿ.