Breaking News

ಕಲಘಟಗಿ ವಿಧಾನ ಸಭಾ ಕ್ಷೇತ್ರದ ಟಿಕೆಟ್‌ ವಿಚಾರ ಶೀಘ್ರ ಇತ್ಯರ್ಥ: ನಾಗರಾಜ ಛಬ್ಬಿ

Spread the love

ಅಳ್ನಾವರ: ‘ಕಲಘಟಗಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ ಹಂಚಿಕೆಯನ್ನು ಪಕ್ಷದ ಹೈಕಮಾಂಡ್‌ ಶೀಘ್ರ ಇತ್ಯರ್ಥ ಮಾಡಲಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾದ ನನಗೇ ಟಿಕೆಟ್ ಸಿಗುವ ವಿಶ್ವಾಸ ಇದೆ’ ಎಂದು ಮಾಜಿ ಶಾಸಕ ನಾಗರಾಜ ಛಬ್ಬಿ ಹೇಳಿದರು.
‘ಕಾಂಗ್ರೆಸ್ ಮುಖಂಡ ಸಂತೋಷ್ ಲಾಡ್ ಈಚೆಗೆ ಟಿಕೆಟ್‌ ನನಗೇ ಸಿಗಲಿದೆ’ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ
ಇನ್ನೊಬ್ಬ ಟಿಕೆಟ್‌ ಆಕಾಂಕ್ಷಿ ನಾಗರಾಜ ಛಬ್ಬಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
‘ನಾನು ಕಡಿಮೆ ಮಾತನಾಡುವ ವ್ಯಕ್ತಿಯಾಗಿದ್ದು, ಜನರ ಮೂಗಿಗೆ ತುಪ್ಪ ಹಚ್ಚುವ ಕೆಲಸ ನನ್ನಿಂದ ಆಗದು. ಸ್ಟೈಲ್, ಡ್ರಾಮ ಮಾಡುವ ಜಾಯಮಾನ ನನ್ನದಲ್ಲ. ಕಲಘಟಗಿ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆ ತರಬೇಕು ಎಂಬ ಹಂಬಲ ನನ್ನದು’ ಎಂದು ಹೇಳಿದರು.
‘ಕಲಘಟಗಿ ಕ್ಷೇತ್ರದ ಜನರು ಮುಗ್ಧರು, ಬಡವರು. ಈ ಬಾರಿ ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ. ಒಳ್ಳೆಯ ವ್ಯಕ್ತಿ ಇಲ್ಲಿ ಶಾಸಕರಾಗಿ ಆಯ್ಕೆಯಾಗುುದು ಖಚಿತ. ಈ ಭಾಗದ ನೀರಾವರಿ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡುುದು ಅವಶ್ಯವಿದೆ ಎಂದ ಅವರು, ‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಎಲ್ಲಡೆ ಕಾಂಗ್ರೆಸ್ ಪಕ್ಷದ ಪರ ಒಲವು ಹೆಚ್ಚಾಗಿದೆ’ ಎಂದರು.
ಕಿರಣ ಪಾಟೀಲ ಕುಲಕರ್ಣಿ, ದಸಗೀರ ಹುಣಶಿಕಟ್ಟಿ, ಶಿವಶಂಕರ ಗೆನಪ್ಪನವರ, ಅಜೀಜ್ ದೇವರಾಯಿ, ಶಂಕರ ಮುಗಳಿ, ಈರಪ್ಪ ಬಳ್ಳಾರಿ, ಹನಮಂತ ಕಿತ್ತೂರ, ನಾಗಪ್ಪ ವಾಲಿಕರ, ಇಮಾಮ ಮುಕಾಸಿ ಇದ್ದರು.


Spread the love

About Karnataka Junction

[ajax_load_more]

Check Also

ನನಗಿಂತ ಭರತ್ ಗೆ ಹೆಚ್ಚು ಮತ ನೀಡಿ ಗೆಲ್ಲಸಿ- ಸಂಸದ ಬಸವರಾಜ ಬೊಮ್ಮಾಯಿ ಮನವಿ

Spread the loveಹುಬ್ಬಳ್ಳಿ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದ್ದ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಭಾರತೀಯ ಜನತಾ …

Leave a Reply

error: Content is protected !!