ಹುಬ್ಬಳ್ಳಿ;
ಹಳೆ ಹುಬ್ಬಳ್ಳಿ ಜಂಗ್ಲಿ ಪೇಟೆಯಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿಯನ್ನು ಉತ್ತರ ಕರ್ನಾಟಕ ವಿಕಾಸ್ ಪಕ್ಷದ ವತಿಯಿಂದ ಆಚರಣೆ ಮಾಡಲಾಯಿತು.
ಉತ್ತರ ಕರ್ನಾಟಕ ವಿಕಾಸ್ ಪಕ್ಷದ ರಾಜ್ಯಾಧ್ಯಕ್ಷ ವಿನಾಯಕ ಮಾಳದಕ
ರ ಶ್ರೀ ಬಸವೇಶ್ವರ ಭಾವಚಿತ್ರ ಜೊತೆಗೆ ಎತ್ತುಗಳಿಗೆ ಪೂಜೆ ಮಾಡಿ ಈ ನಾಡು ಕಂಡ ಸಮಾಜದ ಸುಧಾಕರ ಶ್ರೀ ಬಸವೇಶ್ವರ ಅವರ ನೀಡಿದ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮಾದರಿ ಜೀವನ ಸಾಗಿಸಬೇಕು ಎಂದರು.
ನಗರ ಯುವ ಮೂರ್ಚಾ ಅಧ್ಯಕ್ಷ ಸಿದ್ದು ರಾಯನಾಳ, ಹುಬ್ಬಳ್ಳಿ ಧಾರವಾಡ ಸೆಂಟ್ರೆಲ್ ಯುವ ಮೂರ್ಚಾ ಅಧ್ಯಕ್ಷ ಅಮೃತ ನಿರಂಜನ,ರಾಜ್ಯ ಯುವ ಮೂರ್ಚಾ ಪ್ರಧಾನ ಕಾರ್ಯದರ್ಶಿ ಗಣೇಶ ಕದಂ, ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷ ಮಂಜುನಾಥ , ಬಸವರಾಜ ರಾಯನಾಳ ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
