ಬೆಂಗಳೂರು: ಫ್ರೆಂಚ್ ಕೌನ್ಸಿಲರ್ ಜನರಲ್ ಥಿಯರಿ ಬರ್ತ್ ಲಾಟ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಭೇಟಿಯಾದರು. ಕೊರೊನಾ ಬಳಿಕ ಪ್ರಸಕ್ತವಾಗಿ ಜಗತ್ತಿನಲ್ಲಿ ನಡೆಯುತ್ತಿರುವ ಮಹತ್ತರ ಬೆಳವಣಿಗೆಗಳ ಕುರಿತು ಹಾಗೂ ಭಾರತ-ಫ್ರಾನ್ಸ್ ನಡುವಿನ ಸಂಬಂಧದ ವಿಚಾರವಾಗಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಹಲವಾರು ಮಹತ್ವದ ಸಲಹೆಗಳನ್ನು ಡಿ.ಕೆ.ಶಿವಕುಮಾರ್ ಸಹ ನೀಡಿದರು ಎನ್ನಲಾಗಿದೆ.
