ಹಿಂದೂ ಪುರಾಣಗಳ ಪ್ರಕಾರ, ತ್ರೇತಾಯುಗವು ಅಕ್ಷಯ ತೃತೀಯ ದಿನದಂದು ಪ್ರಾರಂಭವಾಯಿತು. ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವುದರಿಂದ ಭವಿಷ್ಯದಲ್ಲಿ ಅದು ಅಕ್ಷಯವಾಗುತ್ತದೆ ಅರ್ಥಾತ್ ಸಮೃದ್ಧವಾಗುತ್ತದೆ ಎಂಬ ನಂಬಿಕೆ ಇದೆ. ಈ ಕಾರಣದಿಂದ ಜನರು ಈ ದಿನದಂದು ಚಿನ್ನದ ಆಭರಣಗಳನ್ನು ಖರೀದಿಸಲು ಬಯಸುತ್ತಾರೆ. ಅಕ್ಷಯ ತೃತೀಯ ದಿನದಂದು ದಾನ, ಯಜ್ಞದಂತಹ ಶುಭ ಕಾರ್ಯಗಳನ್ನು ಮಾಡುವ ವ್ಯಕ್ತಿಯು ಜೀವನದಲ್ಲಿ ಒಳ್ಳೆಯ ಫಲಿತಾಂಶಗಳನ್ನು ಪಡೆಯುತ್ತಾನೆ ಮತ್ತು ಅಂತಹವರು ಲಕ್ಷ್ಮಿ ದೇವಿಯು ಕೃಪೆಗೆ ಪಾತ್ರರಾಗುತ್ತಾರೆ ಎಂದೂ ನಂಬಲಾಗಿದೆ.
*ಹಬ್ಬವನ್ನು ಆಚರಿಸುವುದು ಹೇಗೆ?*
ಅಕ್ಷಯ ತೃತೀಯದ ಮಂಗಳಕರ ದಿನದಂದು ಜನರು ಉಪವಾಸ ಮಾಡುತ್ತಾರೆ. ಭಗವಾನ್ ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸಿ, ಮಂತ್ರಗಳನ್ನು ಪಠಿಸುತ್ತಾರೆ. ಇದಲ್ಲದೆ, ಭಕ್ತರು ವಿಷ್ಣು, ಗಣೇಶ ಸೇರಿದಂತೆ ಮನೆದೇವತೆಗಳಿಗೆ ನೈವೇದ್ಯವನ್ನು ತಯಾರಿಸಿ ಪೂಜಿಸುತ್ತಾರೆ. ಈ ದಿನ ಹಲವು ವಿಶೇಷ ಕಾರ್ಯಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ.
*ಈ ವಸ್ತುಗಳನ್ನು ದಾನ ಮಾಡಿ*
ಶ್ರೀಗಂಧ: ವಿಶೇಷವಾದ ಅಕ್ಷಯ ತೃತೀಯ ದಿನದಂದು ಶ್ರೀಗಂಧವನ್ನು ಬಡವರಿಗೆ ದಾನ ಮಾಡಿದರೆ ಅಪಘಾತದಂತಹ ಅಪಾಯ ಅಥವಾ ಅನಾವಶ್ಯಕ ಭಯಗಳಿಂದ ಪಾರಾಗಬಹುದು.
ತೆಂಗಿನಕಾಯಿ:ಶ್ರೀಫಲವೆಂದು ಕರೆಯಲ್ಪಡುವ ತೆಂಗಿನಕಾಯಿಗೆ ನಮ್ಮಲ್ಲಿ ವಿಶೇಷವಾದ ಸ್ಥಾನವಿದೆ.ಪೂಜೆ ಹವನಾದಿಗಳಲ್ಲಿ ತೆಂಗಿನಕಾಯಿಯನ್ನು ಪೂಜಿಸುವ ಶಾಸ್ತ್ರವೂ ಇದೆ ಹೀಗಿರುವಾಗ ಈ ಶುಭದಿನದಂದು ನೀವು ತೆಂಗಿನಕಾಯಿ ಯನ್ನು ಬ್ರಾಹ್ಮಣರಿಗೆ ನೀಡಿದರೆ ನಿಮ್ಮ ಪೂರ್ವಜರು ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳಿಂದ ಮುಕ್ತರಾಗುತ್ತಾರೆ.
ಮಜ್ಜಿಗೆ: ಮಜ್ಜಿಗೆಯು ಅಮೃತಕ್ಕೆ ಸಮವಾದುದು. ಹಾಗಾಗಿ ಅಕ್ಷಯ ತೃತೀಯದಂದು ಈ ಮಜ್ಜಿಗೆಯನ್ನು ಬ್ರಾಹ್ಮಣರಿಗೆ ನೀಡಿದರೆ ನಿಮಗೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಳಿತಾಗುತ್ತದೆ.
ವೀಳ್ಯದೆಲೆ: ವೀಳ್ಯದೆಲೆಗೆ ಹಿಂದೂ ಸಂಪ್ರದಾಯದಲ್ಲಿ ಪವಿತ್ರವಾದ ಸ್ಥಾನವಿದೆ.ಹಾಗಾಗಿ ಈ ದಿನದಂದು ವೀಳ್ಯವನ್ನು ನೀರಿನೊಂದಿಗೆ ಇಟ್ಟು ಬ್ರಾಹ್ಮಣರಿಗೆ ನೀಡಿದರೆ ನಿಮ್ಮ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆ ಯಾಗುತ್ತದೆ.
ಉದಕುಂಭ ದಾನ: ಅಕ್ಷಯ ತೃತೀಯದಂದು ಕಂಚು ಅಥವಾ ಬೆಳ್ಳಿ ಯ ಬಟ್ಟಲಿನಲ್ಲಿ ನೀರು ತುಂಬಿ ಅದಕ್ಕೆ ಕೇಸರಿ, ಕರ್ಪೂರ ಹಾಗೂ ತುಳಸಿಯನ್ನಿಟ್ಟರೆ ಪಿತೃ ದೋಷವಿದ್ದಲ್ಲಿ ನಿವಾರಣೆಯಾಗುತ್ತದೆ.
ಅಲ್ಲದೇ ಸಂತಾನ ಭಾಗ್ಯವಿಲ್ಲದೇ ಕೊರಗುವವರಿಗೆ ಸಂತಾನ ಪ್ರಾಪ್ತಿಯೂ ಆಗುತ್ತದೆ.
ಮುತೈದೆಯರಿಗೆ ತಾಂಬೂಲದ ಅರಿಶಿಣ ಕುಂಕುಮ ಹೂವು ಗಂದಾಕ್ಷತೆ ಕೊಟ್ಟರೆ ಸೌಭಾಗ್ಯ ವೃದ್ಧಿ ಯಾಗುತ್ತದೆ.
Check Also
ಅ,27 ರಂದು ಯಕ್ಷಲೋಕ ವಿಜಯ ಪ್ರಸಂಗ ಪ್ರದರ್ಶನ
Spread the loveಹುಬ್ಬಳ್ಳಿ: ಹುಬ್ಬಳ್ಳಿಯ ಬಂಟ ಹವ್ಯಾಸಿ ಕಲಾವಿದರ ಸಂಘ, ಕಲಾರಂಗದ ವತಿಯಿಂದ ಅ. 27ರಂದು ಸಂಜೆ 4 ಗಂಟೆಗೆ …