ಮುಂಬೈ : ಕೆಜಿಎಫ್ ಅನ್ನೋ ಹೆಸರಲ್ಲೇ ಒಂದು ಗತ್ತಿದೆ. ಸಿನಿಮಾ ಬ್ರ್ಯಾಂಡ್ ಇದ್ದಂತೆ. ಇದು ಇವತ್ತಿಗೆ ಮಾತ್ರವಲ್ಲ, ಮುಂದೆ ನೂರಾರು ವರ್ಷಗಳೇ ಕಳೆದರೂ ‘ಕೆಜಿಎಫ್’ ಅನ್ನೋ ಸಿನಿಮಾ ತಾಕತ್ ಏನು ಅನ್ನೋದನ್ನ ಜನ ಖಂಡಿತಾ ಮಾತನಾಡಿಕೊಳ್ಳುತ್ತಾರೆ. ಇಂತಹ ಚಿನ್ನದಂತಹ ಸಿನಿಮಾ ಕುರಿತು ಖಾಸಗಿ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿರುವ ಬಾಲಿವುಡ್ ಸ್ಟಾರ್ ಆಮೀರ್ ಖಾನ್, ‘ಕೆಜಿಎಫ್’ ಹೆಸರು ಕೇಳಿದ್ರೆ ಭಯವಾಗುತ್ತೆ ಎಂದಿದ್ದಾರೆ.
‘ಕೆಜಿಎಫ್’ ಅಂದ್ರೆ ಬಾಲಿವುಡ್‌ಗೆ ಭಯ ಕಾಡುತ್ತಿದೆ ಎನ್ನಬಹುದು. ಯಾಕಂದ್ರೆ ‘ಕೆಜಿಎಫ್’ ಚಾಪ್ಟರ್ 1ರ ಎದುರು ಬಂದಿದ್ದ ಬಾಲಿವುಡ್ ಸಿನಿಮಾಗಳು ತೋಪೆದ್ದು ಹೋಗಿದ್ದವು. ಹಾಗೇ ‘ಎದುರು ಬರೋಕೆ ಸಿದ್ಧವಾಗಿದ್ದ ಬಾಲಿವುಡ್‌ನ ರೀಮೇಕ್ ಸಿನಿಮಾಗಳು ಎಸ್ಕೇಪ್ ಆಗಿವೆ. ಅದರಲ್ಲಿ ಆಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಕೂಡ ಒಂದು. ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಬಿಡುಗಡೆಯ ದಿನಾಂಕವನ್ನ ‘ಕೆಜಿಎಫ್’ ಚಾಪ್ಟರ್ 2 ಕಾರಣಕ್ಕೆ ಆಗಸ್ಟ್‌ವರೆಗೂ ಮುಂದಕ್ಕೆ ಹಾಕಿದ್ದಾರೆ ಆಮೀರ್ ಖಾನ್.