ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹುಬ್ಬಳ್ಳಿ ಮೂಲಕ ಹಗರಿಬೊಮ್ಮನಹಳ್ಳಿಗೆ

Spread the love

ಹುಬ್ಬಳ್ಳಿ; ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರುಮುಂಬೈನಿಂದ ಇಂಡಿಗೋ ವಿಮಾನ 6E 7292 ನೇ ಮುಖಾಂತರ ಹುಬ್ಬಳ್ಳಿಗೆ ಆಗಮಿಸಿದರು ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಳೀಯ ಮುಖಂಡರ ಜೊತೆಗೆ ಕೇಲ ಸಮಯ ಮಾತುಕತೆ ನಡೆಸಿದರು.
ನಂತರ ಅವರು ತಾರಿಹಾಳ ಬ್ರೀಡ್ಜ್ ಮಾರ್ಗವಾಗಿ
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮ ನಹಳ್ಳಿಗೆ ಪ್ರಯಾಣ ಬೆಳೆಸಿದರು
ಈ ಸಂದರ್ಭದಲ್ಲಿ ಆರ್ ಎಸ್ ಎಸ್ ಸ್ಥಳೀಯ ಪ್ರಮುಖರಾದ
ಕೌಸ್ತುಭ ಸಂಶಿಕರ,ಜಯರಾಮ ಶೆಟ್ಟಿ,ಸುನೀಲ ನಲವಡೆ,
ವಿಶ್ವನಾಥ ಸೋಮಾಪೂರ,
ಸತೀಶ ಮುನವಳ್ಳಿ ರವರು ಆಗಮಿಸಿದ್ದರು.
ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.
*ಸಂಚಾರ ಅಸ್ತವ್ಯಸ್ತ* ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಆಗಮಿಸುವ ಹಿನ್ನೆಲೆಯಲ್ಲಿ ಒಂದು ಗಂಟೆಗೂ ಅಧಿಕ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಸಂಪೂರ್ಣವಾಗಿ ತಾರಿಹಾಳ ಬ್ರೀಡ್ಜ್ ದಿಂದ ಗಬ್ಬೂರು ಬೈಪಾಸ್ ವರೆಗೆ ವಾಹನಗಳು ನಿಂತಿದ್ದವು.


Spread the love

Leave a Reply

error: Content is protected !!