ಧಾರವಾಡ : ಇಂದು ವಿಶ್ವ ಕಾರ್ಮಿಕರ ದಿನಾಚರಣೆ. ವಿಶ್ವದಾದ್ಯಂತ ಶ್ರಮಿಕರ ದಿನಾಚರಣೆಯನ್ನು ವಿವಿಧ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ವಿಶ್ವ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಕುಮಾರೇಶ್ವರ ನಗರ ಮಹಿಳಾ ವೇದಿಕೆ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ಧಾರವಾಡದ ಶ್ರೀ ಸಾಯಿ ಎಂಟರಪ್ರೈಸಸ್ ಪೇಪರ್ ಬ್ಯಾಗ್ ಉತ್ಪಾದಕರಾದ ಶ್ರೀಮತಿ ಜ್ಯೋತಿ ಹಿರೇಮಠ ಅವರಿಗೆ ಹಾಗೂ ಮಹಿಳಾ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಪಾಟೀಲ ಕಾರ್ಮಿಕ ದಿನಾಚರಣೆಯ ಹಿನ್ನೆಲೆ ಹಾಗೂ ಮಹತ್ವದ ಕುರಿತು ಮಾತನಾಡಿದರು. ಶ್ರೀಮತಿ ಜ್ಯೋತಿ ಹಿರೇಮಠ ಅವರು ತಮ್ಮ ಸ್ವ ಉದ್ಯೋಗದ ಕುರಿತು ಮಾತನಾಡಿದರು, ಹೇಮಲತಾ ಪ್ರಾರ್ಥಿಸಿದರು. ಮಹಾದೇವಿ ದೊಡ್ಡಗೌಡರ ವಂದಿಸಿದರು. ಪ್ರಿಯಾಂಕಾ ನಿರೂಪಿಸಿದರು. ಕವಿತಾ, ಪದ್ಮಾ, ಚೈತ್ರಾ, ಸರಿತಾ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Check Also
*ಬಂದ್ ಎನ್ನುವ ಕಾನ್ಸೆಪ್ಟ್ ಇಲ್ಲ ಬಲವಂತವಾಗಿ ಬಂದ್ ಮಾಡಿಸುವ ಹಾಗಿಲ್ಲ- ಪೊಲೀಸ್ ಕಮೀಷನರ್ ಖಡಕ್ ಎಚ್ಚರಿಕೆ
Spread the loveಹುಬ್ಬಳ್ಳಿ: ನಾಳೆ ಹುಬ್ಬಳ್ಳಿ ಧಾರವಾಡ ಬಂದ್ ಗೆ ಕರೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಬಲವಂತವಾಗಿ ಬಂದ್ ಮಾಡಿಸುವ …