ಹುಬ್ಬಳ್ಳಿ ಕುಬಸದ ಗಲ್ಲಿಯಲ್ಲಿ ಮತ್ತೊಂದು ರೊಟ್ಟಿ ಘರ್ ಉಪಹಾರ ಗೃಹ ಲೋಕಾರ್ಪಣೆ

Spread the love

ಹುಬ್ಬಳ್ಳಿ; ನಗರದ ಜೈನ್ ಸಮಾಜ ಮಹಾವೀರ ಯುಥ್ ಫೇಡರೇಶನ್ ವತಿಯಿಂದ ಕಳೆದ 14 ವರ್ಷಗಳಿಂದ ರೋಟಿ ಘರ ಉಪಹಾರ ಗೃಹದಲ್ಲಿ ಕೆವಲ 1ರೂಪಾಯಿಗೆ ಊಟವನ್ನು ನೀಡುತ್ತಾ ಬಂದಿದ್ದಾರೆ, ಇಂದು ಹುಬ್ಬಳ್ಳಿಯ ಕುಬಸದ ಗಲ್ಲಿಯಲ್ಲಿ ಮತ್ತೊಂದು ನೂತನವಾಗಿ ಪ್ರಾರಂಭವಾದ ರೊಟಿ ಘರ್ ಉಪಹಾರ ಗೃಹವನ್ನು ಶಾಸಕರಾದ ಪ್ರಸಾದ ಅಬ್ಬಯ್ಯ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಅಧ್ಯಕ್ಷರಾದ ನಾಗೇಶ ಕಲಬುರ್ಗಿ, ಹಾಗೂ ಪ್ರಕಾಶ ಕೊಠಾರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಸಕ ಅಬ್ಯಯ್ಯಾ ಪ್ರಸಾದ್ ಮಾತನಾಡಿ, ಬಡವರ ಹೊಟ್ಟೆ ತುಂಬಿಸುವಂತ ಕೆಲಸ ಬಹಳ ಶ್ಲಾಘನೀಯ ಎಂದರು. ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಅಧ್ಯಕ್ಷ
ನಾಗೇಶ ಕಲಬುರ್ಗಿ ಮಾತನಾಡಿ, ಕೇವಲ ಒಂದು ರೂಪಾಯಿಯಲ್ಲಿ ಬಡ ಜನರಿಗೆ ಊಟ ನೀಡುವುದು ದೊಡ್ಡ ಕೆಲಸ ಅನ್ನದಾನ ಮಾಡಿ ಮಾನವ ಕುಲಕ್ಕೆ ಬಹುಉಪಯೋಗಕಾರಿ ಕೆಲಸವನ್ನು ಮಾಡಲಾಗುತ್ತದೆ. ಇದು ಜೈನ್ ಸಮಾಜಕ್ಕೆ ಪುಣ್ಯದ ಕೆಲಸ ಎಂದರು.
ಈ ಸಂದರ್ಭದಲ್ಲಿ ಮಹಾವೀರ ಯುಥ್ ಫೇಡರೇಶನ್ ಅಧ್ಯಕ್ಷರಾದ ಆನಂದಕುಮಾರ್ ಪಟ್ವಾ, ಸುರೇಶ ಜೀರವಾಲಾ, ಮಹಾವೀರ ಕೊಠಾರಿ, ಕಲಪೇಶ್ ಷಾ, ನಿತೇಶ್ ಜೈನ, ಜಿತೇಂದ್ರ, ಸುರೇಶ, ಮಹೇಂದ್ರ ಶಿಂಘಿ, ಶಿವು ಮೆಣಸಿನಕಾಯಿ, ವಿನಾಯಕ ಲದವಾ, ರಾಜೇಶ್ ಬೊಹ್ರಾ, ಮುಕೇಶ್ ಭಂಡಾರಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love

About gcsteam

    Check Also

    ಐಎನ್​ಐಎಫ್​ಡಿ ಫ್ಯಾಷನ್ ಶೋ 29ರಂದು- ಜ್ಯೋತಿ ಬಿಡಸಾರಿಯಾ

    Spread the loveಹುಬ್ಬಳ್ಳಿ: ನಗರದ ಇಂಟರ್​ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನ್ ವತಿಯಿಂದ 5ನೇ ಆವೃತ್ತಿಯ ಫ್ಯಾಷನ್ ಶೋ ಹಾಗೂ …

    Leave a Reply