Breaking News

ಉಕ್ರೇನ್ ನಲ್ಲಿ ಸಾವನ್ನಪ್ಪುವುದಕ್ಕಿಂತ ರಷ್ಯಾದಲ್ಲಿಯೇ ಬದುಕಿ

Spread the love

ಉಕ್ರೇನ್​​; ಯುದ್ಧದಲ್ಲಿ ಸಾವಿರಾರು ಜನ ಸಾಯುತ್ತಾರೆ ಎಂದು ನಿಮ್ಮ ಸೇನಾ ದಂಡನಾಯಕರುಗಳಿಗೂ ತಿಳಿದಿದೆ. ಹೀಗಿರುವಾಗ ನೀವು ಉಕ್ರೇನ್‌ ಯುದ್ಧದಲ್ಲಿ ಹೋರಾಟ ಮಾಡಬೇಡಿ, ರಷ್ಯಾಗೆ ಹೋಗಿ ಬದುಕಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಮ್ಮ ವಿಡಿಯೊ ಭಾಷಣದಲ್ಲಿ ರಷ್ಯಾದ ಸೈನಿಕರಿಗೆ ಮನವಿ ಮಾಡಿದ್ದಾರೆ.
ಯುದ್ಧದ ಆರಂಭಿಕ ವಾರಗಳಲ್ಲಿ ನಾಶವಾಗಿರುವ ಘಟಕಗಳಿಗೆ ‘ಕಡಿಮೆ ಪ್ರೇರಣೆ ಮತ್ತು ಕಡಿಮೆ ಯುದ್ಧದ ಅನುಭವ’ ಹೊಂದಿರುವವರನ್ನು ಕೂಡ ರಷ್ಯಾ ತನ್ನ ಹೊಸ ಪಡೆಗಳಾಗಿ ನೇಮಿಸಿಕೊಳ್ಳುತ್ತಿದೆ. ಆದ್ದರಿಂದ ಈ ಘಟಕಗಳನ್ನು ಮತ್ತೆ ಯುದ್ಧಕ್ಕೆ ಬಿಡಬಹುದು. ಮುಂದಿನ ದಿನಗಳಲ್ಲಿ ಅವರಲ್ಲಿ ಇನ್ನೂ ಸಾವಿರಾರು ಜನರು ಸಾವಿಗೀಡಾಗುತ್ತಾರೆ ಮತ್ತು ಸಾವಿರಕ್ಕೂ ಅಧಿಕ ಜನರು ಗಾಯಗೊಳ್ಳುತ್ತಾರೆ ಎಂಬುದು ರಷ್ಯಾದ ಕಮಾಂಡರ್‌ಗಳಿಗೆ ಸಂಪೂರ್ಣವಾಗಿ ತಿಳಿದಿದೆ ಎಂದು ಅವರು ಇದೇ ವೇಳೆ ಎಚ್ಚರಿಸಿದರು.ಯುದ್ಧದಲ್ಲಿ ಹೋರಾಡಲು ನಿರಾಕರಿಸಿದ್ದಕ್ಕಾಗಿ ರಷ್ಯಾದ ಕಮಾಂಡರ್‌ಗಳು ತಮ್ಮ ಸೈನಿಕರಿಗೆ ಸಾವಿನ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಜನರಲ್‌ಗಳು ನಿರೀಕ್ಷಿಸುವ ಹೊಸ ನಷ್ಟಗಳ ಬಗ್ಗೆ ಅವರು ಸೈನಿಕರಿಗೆ ಹೇಳುವುದಿಲ್ಲ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ .


Spread the love

About Karnataka Junction

[ajax_load_more]

Check Also

*ಮಹಾಕುಂಭದಲ್ಲಿ ಸಚಿವ ಪ್ರಲ್ಹಾದ ಜೋಶಿ ಕುಟುಂಬ ಪುಣ್ಯಸ್ನಾನ*

Spread the loveಹುಬ್ಬಳ್ಳಿ: ವಿಶ್ವ ಪ್ರಸಿದ್ಧ, ಹಿಂದೂ ಧರ್ಮದ ಶ್ರೇಷ್ಠ ಪ್ರಯಾಗರಾಜ್ ಮಹಾಕುಂಭದಲ್ಲಿ ಇಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ …

Leave a Reply

error: Content is protected !!