ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿ.ಪ. ಸದಸ್ಯ ಎಸ್ ವಿ ಸಂಕನೂರ ಮನವಿ

Spread the love

ಹುಬ್ಬಳ್ಳಿ; ತಮ್ಮ ನ್ಯಾಯಯುವಾದ ವಿವಿಧ ಬೇಡಿಕೆಗಳನ್ನು ಈಡೇರಿಸಲು
ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಇಲಾಖೆಯ ಶಿಕ್ಷಕರ ವಿಧಾನ ಪರಿಷತ್ ಸದಸ್ಯ ಎಸ್ .ವಿ. ಸಂಕನೂರ ಅವರಿಗೆ ಮನವಿ ಸಲ್ಲಿಸಿದೆ. ಶೀಘ್ರವಾಗಿ ಕೇಂದ್ರ ಮಾದರಿ ಏಳನೇ ವೇತನ ಆಯೋಗ ಸಮಿತಿ ರಚಿಸಬೇಕು ಒಂದು ವೇಳೆ ವಿಳಂಬವಾದಲ್ಲಿ ಶೇ.ಇಪ್ಪತ್ತೈದು ಮಧ್ಯಂತರ ಪರಿಹಾರ ನೀಡಬೇಕು.
ಹೊಸ ಪಿಂಚಣಿ ಯೋಜನೆ ಕೈ ಬಿಟ್ಟು ಹಳೆ ಪಿಂಚಣಿ ಯೋಜನೆ ಶೀಘ್ರವಾಗಿ ಜಾರಿಗೊಳಿಸಬೇಕು. ಗ್ರಾಮೀಣ ಶಿಕ್ಷಕರಿಗೆ ಐದು ಸಾವಿರ ರೂಪಾಯಿಗಳನ್ನು ಗ್ರಾಮೀಣ ಭತ್ಯೆ ನೀಡುವುದು, ಶಿಕ್ಷಕರು ಬಯಸಿದ ಜಿಲ್ಲೆಗೆ ಸೇವೆಯಲ್ಲಿ ಒಂದು ಬಾರಿ ವರ್ಗಾವಣೆಯನ್ನು ಸುಗ್ರೀವಾಜ್ಞೆ ಹೊರಡಿಸುವುದರ ಮೂಲಕ ವರ್ಗಾವಣೆ ಕಾಯ್ದೆ ತಿದ್ದುಪಡಿ ಮಾಡಿ ವರ್ಗಾವಣೆ ನಡೆಸಬೇಕು,
ಆರು ವರ್ಷಗಳಲ್ಲಿ ಮೂರು ಬಾರಿ ಮಾತ್ರ ವರ್ಗಾವಣೆಯಾಗಿದ್ದು ಈ ಕೂಡಲೇ ಈ ಸಾಲಿನ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಬೇಕು
ಹೊಸ ತಾಲೂಕಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇಮಿಸಿ ಕಾರ್ಯಾಲಯ ಆರಂಭಿಸಬೇಕು.
ಉತ್ತರ ಕರ್ನಾಟಕದಲ್ಲಿ ಬೃಹತ್ ಶಿಕ್ಷಕ ಸದನ ನಿರ್ಮಿಸಬೇಕು. ಬೆಂಗಳೂರಿನಲ್ಲಿರುವ ಶಿಕ್ಷಕ ಸದನವನ್ನು ನವೀಕರಿಸಬೇಕು. ಕಲಿಕಾ ಚೇತನ ತರಬೇತಿಯನ್ನು ಮೇ ಹದಿನೈದರ ನಂತರ ಪ್ರಾರಂಭಿಸಬೇಕು.ಶಾಲೆಗಳನ್ನು ಬೇಸಿಗೆ ರಜೆ ಪೂರ್ಣ ನೀಡಿ.ಜೂನ್ ಒಂದಕ್ಕೆ ಶಾಲೆ ಪ್ರಾರಂಭಿಸಬೇಕು ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಸಜ್ಜನ ಸರ್ಕಾರಕ್ಕೆ, ರಾಜ್ಯ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ನೇತೃತ್ವದಲ್ಲಿ ಮನವಿ ಮಾಡಿ ಆಗ್ರಹಿಸಿದರು.
ಆದರೆ ಈ ಸಲವೂ ಸಹ ಬೇಡಿಕೆಗಳ ಕುರಿತು ಎಸ್.ವಿ.ಸಂಕನೂರರವರು ಮುಖ್ಯ ಮಂತ್ರಿಗಳ ಹಾಗೂ ಶಿಕ್ಷಣ ಸಚಿವರ ಗಮನ ಸೆಳೆಯುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವಾದಾಗಿ ಭರವಸೆ ನೀಡಿದ್ದಾರೆ. ಈ ಭರವಸೆ ಸಹ ಭರವಸೆ ಆಗಿಯೇ ಉಳಿಯುತ್ತದೆ ಅಥವಾ ಸಕಾರಾತ್ಮಕವಾಗಿ ಜಾರಿಯಾಗುತ್ತಿದೇಯೇ ನೋಡಬೇಕು.
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಎಲ್.ಆಯ್.ಲಕ್ಕಮ್ಮನವರ.ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ.ಸಿ.ಉಪ್ಪಿನ. ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತಿನ ರಾಜ್ಯಾದ್ಯಕ್ಷರಾದ ಗುರು ತಿಗಡಿ ಡಾ, ರಾಮು‌ಮೂಲಗಿ ಮುಂತಾದವರು ಉಪಸ್ಥಿತರಿದ್ದರು


Spread the love

Leave a Reply

error: Content is protected !!