Breaking News

ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣ; 154 ಆರೋಪಿಗಳಿಗೆ ಮೇ 13ರವರೆಗೆ ನ್ಯಾಯಾಂಗ ಬಂಧನ

Spread the love

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ನಡೆದಂತಹ ಗಲಿಭೆ ಸಂಬಂಧಿಸಿಂತೆ ಬಂಧನವಾಗಿರುವ ಒಟ್ಟು 154 ಆರೋಪಿಗಳಿಗೆ ಮೇ 13ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ.
ನಗರದ ಒಂದನೇ ಸೇಷನ್ ಕೋರ್ಟ್‌ನಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲಾಯಿತು. 20 ಆರೋಪಿಗಳ ಪರ ಜಾಮೀನು ಅರ್ಜಿಗಳು ಸಲ್ಲಿಕೆಯಾಗಿವೆ. ಪರೀಕ್ಷೆ ಕಾರಣಕ್ಕೆ ಒಬ್ಬ ಆರೋಪಿ ಪರ ಹಾಗೂ ಅನಾರೋಗ್ಯದ ಹಿನ್ನೆಲೆಯಲ್ಲಿ ಇನ್ನುಳಿದ ಆರೋಪಿ ಪರ ಜಾಮೀನು ಅರ್ಜಿಗಳು ಸಲ್ಲಿಕೆಯಾಗಿವೆ.
ಆರೋಪಿಗಳಿಗೆ ಜಾಮೀನು ದೊರೆತರೆ ಸಾಕ್ಷಿ ನಾಶಪಡಿಸುವ ಹಾಗೂ ಸಮಾಜದಲ್ಲಿ ಶಾಂತಿ ಕದಡುವ ಸಾಧ್ಯತೆಯಿದೆ ಎಂದು ಪೊಲೀಸರು ಆಕ್ಷೇಪಣೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಏ. 16ರ ಗಲಭೆ ನಂತರ ಬಂಧಿತರಾದ ಎಲ್ಲಾ ಆರೋಪಿಗಳನ್ನು ಏ. 30ರವರೆಗೆ ನ್ಯಾಯಾಂಗ ವಶದಲ್ಲಿ ಇಡಲಾಗಿತ್ತು.
ಅಭಿಷೇಕ ಹಿರೇಮಠ ಆಕ್ಷೇಪಾರ್ಹ ಸ್ಟೇಟಸ್‌ ಇಟ್ಟಿದ್ದು ಆ ವಿವಾದಾತ್ಮಕ ವಿಡಿಯೋ ಎಡಿಟ್ ಮಾಡಿದ್ದ ವೀರಭದ್ರ ಪಾಟೀಲ್ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ದೂರುದಾರ ಹಾಗೂ ಗಲಭೆಯಲ್ಲಿ ಪಾಲ್ಗೊಂಡ ಆರೋಪದ ಮೇಲೆ ಬಂಧಿತನಾಗಿ ನ್ಯಾಯಾಂಗ ವಶದಲ್ಲಿದ್ದ ಮಹ್ಮದ್‌ಅಜರುದ್ದೀನ್‌ ಗೆ ಅವನನ್ನು ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ. ವಿಚಾರಣೆಗಾಗಿ ನ್ಯಾಯಾಲಯ ಅವನನ್ನು ಮೇ 2ರವರೆಗೆ ಪೊಲೀಸ್‌ ಕಸ್ಟಡಿ ಒಪ್ಪಿಸಿದೆ.
ದೂರುದಾರ ಮಹ್ಮದ್‌ಅಜರುದ್ದೀನ್‌ ಕೆಲವರಿಗೆ ಪ್ರಚೋದನೆ ನೀಡಿ ಗಲಭೆಗೆ ಕಾರಣವಾಗಿರಬಹುದು ಎನ್ನುವ ಕುರಿತು ಹಾಗೂ ಸ್ಟೇಟಸ್‌ ಸಂಬಂಧಿಸಿ ಕೆಲವಷ್ಟು ಮಾಹಿತಿ ಸಂಗ್ರಹಿಸಲು ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.


Spread the love

About Karnataka Junction

    Check Also

    ಹುಬ್ಬಳ್ಳಿಯಲ್ಲಿಯೇ ಬೀಡು ಬಿಟ್ಟ ಎನ್ ಐಎ ತಂಡ ಏನ್ ಮಾಡತಾ ಇದೆ ಗೊತ್ತಾ?

    Spread the loveಹುಬ್ಬಳ್ಳಿಯಲ್ಲಿಯೇ ಬೀಡು ಬಿಟ್ಟ ಎನ್ ಐಎ ತಂಡ ಏನ್ ಮಾಡತಾ ಇದೆ ಗೊತ್ತಾ? ರಾಮೇಶ್ವರಂ ಕೆಫೆಯಲ್ಲಿ ಬಾಂಬ್ …

    Leave a Reply

    error: Content is protected !!