Breaking News

ನಾಮಫಲದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಇರದಕ್ಕೆ ಕಾಂಗ್ರೆಸ್ ವಿರೋಧ- ಲೋಕಾರ್ಪಣೆ ಮಾಡದೇ ವಾಪಾಸ್ ಆದ ಸಚಿವ ಜೋಶಿ

Spread the love

ಧಾರವಾಡ;ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಯಾತ್ರಿ ನಿವಾಸದ ಕಟ್ಟಡದ ಉದ್ಘಾಟನೆ‌ ಮಾಡದೇ ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಶಾಸಕ ಅಮೃತ ದೇಸಾಯಿ, ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಸೇರಿದಂತೆ ಮುಂತಾದವರು ವಾಪಾಸ್ ಬಂದ ಘಟನೆ ಶನಿವಾರ ನಡೆದಿದೆ.
2017_18 ರಲ್ಲಿ ಸಾಲಿನಲ್ಲಿ ನಿರ್ಮಾಣವಾಗಿದ್ದ ಯಾತ್ರಿ ನಿವಾಸ ಕಟ್ಟಡಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ ಸಾಕಷ್ಟು ಶ್ರಮಿಸಿದ್ದರು. ಆದರೆ ಇಂದು ಲೋಕಾರ್ಪಣೆಗೊಳ್ಳಬೇಕಾದ ಕಟ್ಟಡದ ಉದ್ಘಾಟನಾ ಫಲಕದಲ್ಲಿ ವಿನಯ ಕುಲಕರ್ಣಿ ಅವರ ಹೆಸರನ್ನೇ ಕೆತ್ತಿರಲಿಲ್ಲ. ಇದರಿಂದಾಗಿ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ವಿನಯ ಕುಲಕರ್ಣಿ ಅವರ ಹೆಸರು ಇರದೇ ಉದ್ಘಾಟನೆ ಮಾಡುವುದು ಬೇಡಾ ಎಂದು ಪಟ್ಟು ಹಿಡಿದರು. ಕೇಲ ಕಾಲ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ, ನಾಯಕರ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಸಹ ನಡೆಯಿತು . ಯಾವುದೇ ಕಾರಣಕ್ಕೊ ಉದ್ಘಾಟನೆ ಮಾಡದೇ ಬಿಡುವುದಿಲ್ಲ ಎಂದು ಸಹ ಭಾರತೀಯ ಜನತಾ ಪಕ್ಷದ ನಾಯಕರು ಸಹ ಪಟ್ಟು ಹಿಡಿದರು.
ಧಾರವಾಡ ತಾಲೂಕಿನ ಹೆಬ್ಬಳ್ಳಿ
ಯಾತ್ರಿ ನಿವಾಸಕ್ಕೆ ಕಿಲಿಹಾಕಿದ ಕಾಂಗ್ರೆಸ್ ಕಾರ್ಯಕರ್ತರು ಸಚಿವರ ಹಾಗೂ ಭಾರತೀಯ ಜನತಾ ಪಕ್ಷದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಫಲಕದಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ವಿನಯ ಕುಲಕರ್ಣಿ ಅವರ ಹೆಸರನ್ನು ಯಾಕೆ ಬಿಡಲಾಯಿತು ಎಂದು ಪ್ರಶ್ನೆ ಸಹ ಮಾಡಲಾಯಿತು.
ಕಲ್ಲಿನ ನಾಮ ಮೇಲೆ ಮಾಜಿ ಸಚಿವ ವಿನಯ ಕುಲಕರ್ಣಿ, ಹೆಸರು ಹಾಕದೆ ಇರೋದಕ್ಕೆ ಏನು ಕಾರಣ ಎಂದು ಸಹ ಕೇಳಿದರು.
2017_18 ರಲ್ಲಿ ಕೆ ಆರ್ ಡಿ ಸಿಎಲ್ ನಿಂದ ನಿರ್ಮಾಣವಾಗಿದ್ದ ಯಾತ್ರಿ ನಿವಾಸದ ಕಟ್ಟಡಕ್ಕೆ
ಯಾಕೆ ಕೀ ಹಾಕಿದ್ದಿರಿ ಎಂದು ಪ್ರಶ್ನೆ ಮಾಡಿದ ಬಿಜೆಪಿ ನಾಯಕರಿಗೆ ಮಾಜಿ ಸಚಿವ ಸಚಿವರ ಹೆಸರು ಹಾಕದೆ ಇರೋದಕ್ಕೆ ಕಾರಣ ಕೊಡಿ ಎಂದರು. ನಂತರ ಕೇಲ ಕಾಲ ಅಲ್ಲಿಯೇ ಕಾಯ್ದು ನಿಂತು
ಕಾಂಗ್ರೆಸ್ ಕಾರ್ಯಕರ್ತರ ವಿರೋಧದ ಮಧ್ಯ ಯಾತ್ರಿ ನಿವಾಸ ಉದ್ಘಾಟನೆ ಮಾಡದೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ , ಶಾಸಕ ಅಮೃತ ದೇಸಾಯಿ, ಸಿ.ಟಿ ರವಿ ಹಾಗೂ ಅಧಿಕಾರಿಗಳು ಮರಳಿದರು


Spread the love

About Karnataka Junction

    Check Also

    ಸಿಐಡಿ ಡಿಜಿಪಿ ಡಾ.ಎ.ಎಂ.ಸಲೀಂ ಅಂಜಲಿ ,ನೇಹಾ ಕೊಲೆ ಪ್ರಕರಣಗಳ ಕುರಿತು ಮಾಹಿತಿ ಸಂಗ್ರಹ

    Spread the loveಹುಬ್ಬಳ್ಳಿ: ಪ್ರಿಯಕರನಿಂದಲೇ ಕೋಲೆಗೀಡಾಗಿದ್ದ ನೇಹಾ ನಿರಂಜನ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ಒಂದು …

    Leave a Reply

    error: Content is protected !!