ಹುಬ್ಬಳ್ಳಿ: ಇಲ್ಲಿನ ಕೆ.ಎಲ್.ಇ. ವಿಶ್ವವಿದ್ಯಾಲಯದ 2019-20 ಹಾಗೂ 2020-22 ನೇ ಸಾಲಿನ ಘಟಿಕೋತ್ಸವ ಮೇ 1 ರಂದು ವಿಶ್ವವಿದ್ಯಾಲಯದ ನೂತನ ಕ್ರೀಡಾ ಸಂಕೀರ್ಣದಲ್ಲಿ ಬೆಳಿಗ್ಗೆ 9.30ಕ್ಕೆ ನಡೆಯಲಿದೆ.ಮುಖ್ಯ ಅತಿಥಿಯಾಗಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಡಾ.ಅನಿಲ್ ಸಹಸ್ರಬುದ್ಧೆ ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವಿ ಕುಲಪತಿ ಡಾ.ಅಶೋಕ ಶೆಟ್ಟರ್ ತಿಳಿಸಿದರು..ವಿವಿ.ಯಿಂದ ಮೊದಲ ಬಾರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದ್ದು, ಭಾರತ ಫೋರ್ಜ್ ಲಿಮಿಟೆಡ್ ಅಧ್ಯಕ್ಷ ಬಾಬಾಸಾಹೇಬ್ ಕಲ್ಯಾಣಿ ಅವರಿಗೆ ನೀಡಲಾಗುತ್ತಿದೆ.ಘಕೋತ್ಸವದಲ್ಲಿ ಉನ್ನತ ಸಾಧನೆ ಮಾಡಿದವರಿಗೆ 32 ಚಿನ್ನದ ಹಾಗೂ 32 ಬೆಳ್ಳಿ ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ. 2,509 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದರು
