ಪ್ಲೋರಿಡಾ : ಇಲ್ಲಿ ಒಬ್ಬಳು ಗೃಹಿಣಿ ವಿಚಿತ್ರ ಕೆಲಸದ ಮೂಲಕ ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದಾಳೆ. ಈ ಮಹಿಳೆ ಮಾಡಿರುವ ಕೆಲಸ ಒಂದು ಕಡೆ ನಗು ತರಿಸಿದ್ರೆ ಇನ್ನೊಂದೆಡೆ ಬೆರಗು ಮೂಡಿಸುತ್ತಿದೆ. ಹೌದು, ಫ್ಲೋರಿಡಾದಲ್ಲಿ ಈ ಮಹಿಳೆ ಮಾಜಿ ಪತಿಯೊಂದಿಗೆ ತನ್ನ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದಾಳೆ.
43 ವರ್ಷದ ಕ್ರಿಸ್ಟಲ್ ಬಾಲ್ ಎಂಬಾಕೆ ಫ್ಲೋರಿಡಾದ ಪನಾಮ ಸಿಟಿ ಬೀಚ್ ಪ್ರದೇಶದಲ್ಲಿ ತನ್ನ ಮನೆಯೊಂದನ್ನು $ 699,000 (ಅಂದಾಜು ರೂ. 5.3 ಕೋಟಿ) ಗೆ ಮಾರಾಟಕ್ಕಿಟ್ಟಿದ್ದಾಳೆ. ಮನೆಯು ಪೂಲ್, ಹಾಟ್ ಟಬ್, ಮೂರು ಮಲಗುವ ಕೋಣೆಗಳು ಮತ್ತು ಆಕೆಯ ಮಾಜಿ ಪತಿ 54 ವರ್ಷದ ರಿಚರ್ಡ್ ಚೈಲೊ ಸೇರಿದಂತೆ ಇತರ ಸೌಕರ್ಯಗಳನ್ನು ಹೊಂದಿರುವುದಾಗಿ ತಿಳಿಸಿದ್ದಾಳೆ. ಕ್ರಿಸ್ಟಲ್ ಮತ್ತು ರಿಚರ್ಡ್ ಇತ್ತೀಚೆಗೆ ಬೇರ್ಪಡುವ ಮೊದಲು ಏಳು ವರ್ಷಗಳ ಕಾಲ ಜೊತೆಯಲ್ಲೇ ಇದ್ದರು.
ತನ್ನ ಮನೆಯನ್ನು ಪಟ್ಟಿ ಮಾಡುವಾಗ, ಕ್ರಿಸ್ಟಲ್ ಖರೀದಿದಾರರಿಗೆ ವಿಶಿಷ್ಟವಾದ ಒಪ್ಪಂದವನ್ನು ನೀಡಿದ್ದಾಳೆ. ರಿಚರ್ಡ್‌ನನ್ನು ಇರಿಸಿಕೊಳ್ಳಲು ಒಪ್ಪಿಕೊಂಡರೆ, ಬೆಲೆಯನ್ನು ಕಡಿತಗೊಳಿಸುವುದಾಗಿ ತಿಳಿಸಿದ್ದಾಳೆ. ಜೊತೆಗೆ ತನ್ನ ಪತಿಯ ಫೋಟೋವನ್ನು ಕೂಡ ಹಂಚಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಈತ ಬಹಳ ಚೆನ್ನಾಗಿ ಅಡುಗೆ ಮಾಡುತ್ತಾನೆ ಎಂದು ಹೇಳಿದ್ದಾಳೆ.