ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ನಡುವಿನ ರಾಷ್ಟ್ರಭಾಷಾ ವಿವಾದ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದೀಗ ಬಾಲಿವುಡ್ ಮತ್ತು ಸೌತ್ ಸಿನಿಮಾರಂಗ ಎಂದು ಎರಡು ಭಾಗವಾಗಿದ್ದು ಹಿಂದಿ ಅಭಿಮಾನಿಗಳು ಅಜಯ್ ದೇವಗನ್ ಪರ ನಿಂತಿದ್ದಾರೆ. ಇದರ ಮಧ್ಯೆ ಈಗ ಸಿಂಗಂ ನಮ್ಮ ರಿಯಲ್ ಹೀರೋ ಈಗ ಜೋರಾಗಿದೆ. ಹೌದು, ಅಜಯ್ ದೇವಗನ್ ಪರ ನಿಂತಿರುವ ಅವರ ಅಭಿಮಾನಿಗಳು ಸಿಂಗಂ ನಮ್ಮ ರಿಯಲ್ ಹೀರೋ ಎಂಬ ಅಭಿಯಾನ ಆರಂಭಿಸಿದ್ದಾರೆ ಇದು ಇನ್ನೊಂದು ಯಡವಟ್ಟಿಗೆ ಕಾರಣವಾಗಿದೆ.
ತಮಿಳು ಅಭಿಮಾನಿಗಳು ಸಹ ನಟ ಸೂರ್ಯ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ. ಸಿಂಗಂ ಸಿನಿಮಾ ಮೊದಲು ಮಾಡಿದ್ದು ನಟ ಸೂರ್ಯ. ಬಳಿಕ ಅದು ಹಿಂದಿಗೆ ರಿಮೇಕ್ ಆಗಿ ಅಜಯ್ ದೇವಗನ್ ಕಾಣಿಸಿಕೊಂಡಿದ್ದರು. ಹಾಗಾಗಿ ತಮಿಳು ಅಭಿಮಾನಿಗಳು ಸಿಂಗಂ ನಮ್ಮ ಹೀರೋ ಎಂದು ಹೇಳುತ್ತಿದ್ದಾರೆ. ಅಲ್ಲದೆ ರಿಮೇಕ್ ನಲ್ಲಿ ಕಾಣಿಸಿಕೊಂಡ ಅಜಯ್ ದೇವಗನ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಅಜಯ್ ದೇವಗನ್ ರಿಮೇಕ್ ಸಿಂಗಂ, ಸೂರ್ಯ ರಿಯಲ್ ಸಿಂಗಂ ಎಂದು ಹೇಳುತ್ತಿದ್ದಾರೆ. ಸೂರ್ಯ ಫೋಟೋ ಶೇರ್ ಅಭಿಮಾನಿಗಳು ರಿಯಲ್ ಎಂದು ಹೇಳುತ್ತಿದ್ದಾರೆ. ತಮಿಳು ಅಭಿಮಾನಿಗಳು ಅಜಯ್ ದೇವಗನ್ ವಿರುದ್ಧ ಸಿಡಿದೆದ್ದಿದ್ದಾರೆ.
ರಾಷ್ಟ್ರಭಾಷೆಯ ಕಿಡಿ ಇದೀಗ ಬಾಲಿವುಡ್ ಮತ್ತು ಸೌತ್ ಸಿನಿಮಾರಂಗ ಎನ್ನುವ ಚರ್ಚೆಗೆ ತಿರುಗಿದೆ. ದಕ್ಷಿಣ ಭಾರತದ ಸಿನಿಮಾಗಳ ಭರ್ಜರಿ ಸಕ್ಸಸ್ ಬಾಲಿವುಡ್ ಮಂದಿಯ ನಿದ್ದೆ ಗೆಡಿಸಿರುವುದು ಈ ಎಲ್ಲಾ ಚರ್ಚೆಗೆ ದಾರಿ ಮಾಡಿಕೊಡುತ್ತಿದೆ. ದಕ್ಷಿಣ ಸಿನಿಮಾಗಳ ಹವಾಳಿಯಿಂದ ತಪ್ಪಿಸಿಕೊಳ್ಳಲು ಬಾಲಿವುಡ್ ಮಂದಿ ಹಿಂದಿ ಅಸ್ತ್ರ ಪ್ರಯೋಗ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.