ಬೆಂಗಳೂರು: ನಿರೀಕ್ಷೆಯಂತೆಯೇ ಯಶ್ ನಟನೆಯ “ಕೆಜಿಎಫ್-2′ ಚಿತ್ರ ಒಂದು ಸಾವಿರ ಕೋಟಿ ರೂ.ಕಲೆಕ್ಷನ್ ಮಾಡಿದ್ದು, ಈ ಸಾಧನೆ ಮಾಡಿರುವ ಕನ್ನಡ ಮೊದಲ ಹಾಗೂ ಭಾರತೀಯ ಚಿತ್ರರಂಗದ ನಾಲ್ಕನೇ ಸಿನೆಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬಿಡುಗಡೆಗೂ ಮುನ್ನ ಭಾರಿ ಹೈಪ್ ಕ್ರಿಯೇಟ್ ಮಾಡಿದ್ದ ನಮ್ಮ ರಾಕಿಬಾಯ್ 15ನೇ ದಿನಕ್ಕೆ ಸಾವಿರ ಕೋಟಿ ಕಲೆಕ್ಷನ್ ಮಾಡುವ ಮೂಲಕ ಅತಿ ವೇಗದಲ್ಲಿ ಸಾವಿರ ಕೋಟಿ ಕ್ಲಬ್ ಸೇರಿದೆ. ಗುರುವಾರದ ವೇಳೆಗೆ ಚಿತ್ರದ ಜಾಗತಿಕ ಕಲೆಕ್ಷನ್ 997 ಕೋಟಿ ರೂ. ದಾಟಿದ್ದು, ಶುಕ್ರವಾರದ ಸಾವಿರ ಕೋಟಿ ರೂಪಾಯಿಯ ಸಾಧನೆ ಮಾಡಿತು.
ಈಗಾಗಲೇ ಒಂದು ಸಾವಿರ ಕೋಟಿ ರೂ. ಕಲೆಕ್ಷನ್ ಮಾಡಿರುವ ಭಾರತೀಯ ಸಿನೆಮಾಗಳಲ್ಲಿ “ಕೆಜಿಎಫ್-2′ ನಾಲ್ಕನೇ ಚಿತ್ರ. “ದಂಗಲ್’, “ಬಾಹುಬಲಿ-2′ ಹಾಗೂ “ಆರ್‌ಆರ್‌ಆರ್’ ಚಿತ್ರ ಬಿಟ್ಟರೆ ಸಾವಿರ ಕೋಟಿ ಕ್ಲಬ್ ಸೇರಿದ ಹೆಗ್ಗಳಿಕೆ “ಕೆಜಿಎಫ್-2’ನದ್ದು.