ಧಾರವಾಡ : ಬೇಸಿಗೆಯಿಂದ ಎಲ್ಲೆಡೆ ನೀರಿನ ಬವಣೆ ಶುರುವಾಗಿದೆ. ನೀರಿಗಾಗಿ ಎಲ್ಲ ಜನರು ಪರದಾಡುತ್ತಿದ್ದಾರೆ. ಆದರೆ ಇತ್ತ ಮಹಾನಗರ ಪಾಲಿಕೆ ಚೆಲ್ಲಾಟದಿಂದ ನಗರವಾಸಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ನೀರು ಇದ್ದು ಹತ್ತು ದಿನಗಳಿಂದ ಕುಡಿಯುವ ನೀರು ಬಿಡದ ಕಾರಣ ಅವಳಿ ನಗರದ ಜನ ರೊಚ್ಚಿಗೆದ್ದು ಇಂದು ಬೀದಿಗಿಳಿದಿದ್ರು. ನೀರಿನ ಸಮಸ್ಯೆ ಅರಿತು ಮಾಜಿ ಶಾಸಕರು ಕೂಡ ಬೀದಿಗಳಿದು ಪ್ರತಿಭಟನೆ ನಡೆಸಿದರು.
ಹೌದು, ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಕಳೆದ 10 ದಿನಗಳಿಂದ ಕುಡಿಯುವ ನೀರು ಸರಬರಾಜು ಆಗಿಲ್ಲದ ಕಾರಣ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಗಳಾಗುತ್ತಿದೆ. ಕಾರಣ ಇಂದು ಧಾರವಾಡದ ಗೋವಾ ರಸ್ತೆಯಲ್ಲಿ ಮಾಜಿ ಶಾಸಕರಾದ ಶ್ರೀ ಎನ್.ಹೆಚ್. ಕೋನರಡ್ಡಿ ಅವರ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು.
