ಹೊಸದಿಲ್ಲಿ : ದೇಶ ರಕ್ಷಣೆಗೆ ಯೋಧರನ್ನು ಹುರಿಗೊಳಿಸುವುದು ಮಾತ್ರವಲ್ಲದೆ ಯೋಧರ ವೈಯಕ್ತಿಕ ಜೀವನಕ್ಕೂ ಭಾರತೀಯ ಸೇನೆ ಪ್ರಾಮುಖ್ಯತೆ ನೀಡುತ್ತಿದ್ದು ಕಣಿವೆಯ ಗಡಿಯಲ್ಲಿ ಸೇವೆಯಲ್ಲಿದ್ದ ಯೋಧನೋಬ್ಬನ ಮದುವೆಗೆ ಅವರನ್ನು 2,500 ಕಿಲೋ ಮೀಟರ್ ದೂರದ ಊರಿಗೆ ಬಿಎಸ್ಎಫ್ ಹೆಲಿಕಾಪ್ಟರ್ ಬಳಸಿರುವುದು ಇದಕ್ಕೂಂದು ತಾಜಾ ನಿದರ್ಶನ. ಜಮ್ಮು ಕಾಶ್ಮೀರದ ಮಚಲ್ ಸೆಕ್ಟರ್ ನ ಎತ್ತರದ ಪ್ರದೇಶದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ನಿಯೋಜನೆಗೊಂಡಿದ್ದ ಯೋಧ ನಾರಾಯಣ ಬೆಹರೆ ಮೂಲತಃ ಒಡಿಶಾ ರಾಜ್ಯದವರಾಗಿದ್ದಾರೆ ಮೇ 2 ಕ್ಕೆ ಅವರ ಮದುವೆ ನಿಶ್ಚಯವಾಗಿದೆ .
ಎಲ್ಒಸಿ ಪೋಸ್ಟ್ ಪೂರ ಹಿಮಾವೈತವಾಗಿರುವ ಕಾರಣ ಜಮ್ಮು ಕಾಶ್ಮೀರಕ್ಕೆ ರಸ್ತೆ ಸಂಪರ್ಕ ಲಭ್ಯವಾಗಿರುವುದಿಲ್ಲ ಇತ್ತ ಮನೆಯಲ್ಲಿ ತನ್ನ ಮದುವೆಗೆ ಸಂಭ್ರಮವಿದ್ದರೂ ಸಾರಿಗೆ ವ್ಯವಸ್ಥೆ ಇರದ ಕಾರಣ ಬೆಹರ ಮನೆಗೆ ಹಿಂದಿರಗಲಾಗದೆ ತಮ್ಮ ಜೀವನದ ಮಹತ್ತರ ಘಟ್ಟವೂಂದಕ್ಕೆ ಸಾಕ್ಷಿಯಾಗಲಿರುವ ಹಲವು ಸಂಭ್ರಮಗಳಿಂದ ವಚಿಂತರಾಗಿರುವ ಬೇಸರದಲ್ಲಿದ್ದರು ಈ ವಿಚಾರ ತಿಳಿದ ಬಳಿಕ ಬಿಎಸ್ಎಫ್ ಐಜಿ ( ಕಾಶ್ಮೀರ ಗಡಿಭಾಗದಲ್ಲಿ ) ರಾಜಾ ಬಾಬು ಅವರ ಶ್ರೀನಗರದಲ್ಲಿ ಚೀತಾ ವಿಶೇಷ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿಸಿದ್ದರು ಯೋಧ ಬೆಹರ ಅವರನ್ನು ಅವರ ಸ್ವಗ್ರಹಕ್ಕೆ ತಲುಪಿಸುವಂತೆ ಆದೇಶಿಸಿದ್ದಾರೆ. ಸೈನಿಕರ ಕಲ್ಯಾಣ ನಮ್ಮ ಮೊದಲ ಹೆಜ್ಜೆ ಎಂದೆ ಆದ್ಯತೆ ಈ ಹಿನ್ನೆಲೆಯಲ್ಲಿ ಯೋಧ ಬೆಹರ ಅವರಿಗಾಗಿ ವಿಶೇಷ ಹೆಲಿಕಾಪ್ಟರ್ ಮೂಲಕ ಹಾರಾಟಕ್ಕೆ ಅನುಕೂಲ ಮಾಡಿದ್ದರು.
ಪೋಷಕರ ಬೇಡಿಕೆಗೆ ಸ್ಪಂದನೆ
ಮಗನ ಮದುವೆಗಾಗಿ ಈಗಾಗಲೇ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದು, ನಿಗದಿತ ದಿನಾಂಕಕ್ಕೆ ತಮ್ಮ ಮಗನನ್ನು ಬರುವುದಿಲ್ಲವೇನೂ ಎಂಬ ಆತಂಕದಿಂದ ಬೆಹರ ಕುಟುಂಬ ಅವರ ಪೋಷಕರು ವ್ಯಕ್ತಪಡಿಸಿದ್ದರು .ಅಲ್ಲದೇ ಈ ವಿಚಾರವಾಗಿ ತಮ್ಮ ಮಗ ಕಾರ್ಯ ನಿರ್ವಹಿಸುತ್ತಿರುವ ಸೇನಾ ಘಟಕದ ಕಮಾಂಡರ್ ಗಳನ್ನ ಸಂಪರ್ಕಿಸಿ ಮಗನನ್ನು ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದರು. ಪೋಷಕರ ಮನವಿಗೆ ಸ್ಪಂದಿಸಿ ಈ ಕ್ರಮ ಕೈ ಗೊಂಡಿರುವುದಾಗಿ ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ .