ಹುಬ್ಬಳ್ಳಿ: ಹಳೇಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಗಳ ಹುಡುಕಾಟ ಮುಂದುವರಿಸಿದ್ದುಮತ್ತೆ ಎಂಟು ಮಂದಿ ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ 154ಕ್ಕೆ ಏರಿದೆ.
‘ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧನಕ್ಕೆ ಒಳಗಾಗಿರುವ ಆರೋಪಿಗಳು ನೀಡುವ ಸುಳಿವಿನ ಮೇರೆಗೆ ಬಂಧಿಸಲಾಗುತ್ತಿದೆ. ಹಾವೇರಿ, ಗದಗ, ದಾಂಡೇಲಿಯಲ್ಲಿ ತಲೆಮರೆಸಿಕೊಂಡಿದ್ದ ಕೆಲವರನ್ನು ಬುಧವಾರ ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
*ನ್ಯಾಯಾಂಗ ಬಂಧನಕ್ಕೆ ವಸೀಂ* ಗಲಭೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ವಸೀಂ ಪಠಾಣ್‌ನನ್ನು ಪೊಲೀಸರು ಬುಧವಾರ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಐದು ದಿನಗಳ ಕಾಲ ವಸೀಂನನ್ನು ಗೋಪ್ಯ ಸ್ಥಳಕ್ಕೆ ಕರೆದೊಯ್ದು ತೀವ್ರ ವಿಚಾರಣೆ ನಡೆಸಿದ್ದಾರೆ. ಏ.30ರವೆಗೆ ನ್ಯಾಯಾಂಗ ಬಂಧನವಿದ್ದು, ಧಾರವಾಡ ಕಾರಾಗೃಹದಲ್ಲಿ ಇರಿಸಲಾಗಿದೆ. ಆರೋಪಿಗಳಾದ ನಾಸೀರ್ ಅಹ್ಮದ್ ಹೊನ್ಯಾಳ ಹಾಗೂ ಆರಿಫ್ ನಾಗರಾಳ ಅವರನ್ನು ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.
ಹಳೇ ಹುಬ್ಬಳ್ಳಿ ಘಟನೆ: ಬಂಧಿತರ ವಿಚಾರಣೆ ಮುಂದುವರಿಕೆ
ಗಲಭೆ ಆದಾಗಿನಿಂದಲೂ ಗಲಭೆಕೋರರ ಬಂಧನ ಮಾಡುವಲ್ಲಿ ಆರಂಭದಲ್ಲಿ ಬ್ಯುಸಿಯಾಗಿದ್ದ ಪೊಲೀಸರು ನಂತರ ಎರಡು ದಿನಗಳ ಕಾಲ ಯಾವುದೇ ಆರೋಪಗಳನ್ನು ಬಂದನ ಮಾಡರಲಿಲ್ಲ. ಮೊದಲು ಬಂಧನ ಮಾಡಿದವರನ್ನು ವಿಚಾರಣೆ, ನ್ಯಾಯಾಲಯಕ್ಕೆ ಹಾಜರು ಪಡಿಸುವುದು, ಸ್ಥಳ ಮಹಜರು ಮಾಡುವುದು ಜೊತೆಗೆ ಕಾಲ್ ಡಿಟೇಲ್ ಚಕ್ ಸೇರಿದಂತೆ ತನಿಖೆಯಲ್ಲಿ ತಲ್ಲೀನರಾಗಿದ್ದರು. ಈಗ ಮತ್ರೆ ಆರೋಪಿಗಳ ಹೆಡೆಮುರಿ ಕಟ್ಟುತಿದ್ದು ಬಂಧಿತರ ಸಂಖ್ಯೆ ಏರುತಲಿದೆ.
ಇದೀಗ ಬಂಧಿತರ ವಿಚಾರಣೆ ಮತ್ತು ಗಲಭೆ ಕುರಿತ ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ. .
ಏ.16 ರ ರಾತ್ರಿ ಹಳೇಹುಬ್ಬಳ್ಳಿ ನಡೆದ ಗಲಭೆ ದಿನದಿಂದ ಪೊಲೀಸರ ಎಂಟು ತಂಡಗಳು ತೀವ್ರ ಕಾರ್ಯಾಚರಣೆ ನಡೆಸಿದ್ದವು. ಹೀಗಾಗಿ ನಿತ್ಯವೂ 10-14 ಜನ ಗಲಭೆಕೋರರನ್ನು ತಂಡಗಳು ಬಂಧಿಸಿದ್ದರು. ಏ.27ರಂದು ಬಂಧಿತ 8 ಜನ ಸೇರಿ ಒಟ್ಟು 154 ಜನರನ್ನ ಬಂದನ ಮಾಡಿದಂತಾಗಿದೆ.
ಈ ಮಧ್ಯೆ ಬಂಧಿತರ ಸಂಬಂಧಿಗಳು ಠಾಣೆಗೆ ಭೇಟಿ ನೀಡುವುದು, ನಮ್ಮ ಮಗ ಅಮಾಯಕ, ಅವನನ್ನು ಬಿಟ್ಟುಬಿಡಿ ಎಂದು ಪೊಲೀಸರ ಎದುರು ಬಂದಿತರ ಕುಟುಂಬಸ್ಥರು ಠಾಣೆ ಎದುರು ಅಳಲು ತೋಡಿಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಗಲಭೆನಂತರದಲ್ಲಿರಣರಂಗದಂತಾಗಿದ್ದ ಹಳೇಹುಬ್ಬಳ್ಳಿ ಪ್ರದೇಶ ಇದೀಗ ಸಹಜ ಸ್ಥಿತಿಗೆ ಮರಳಿದೆ. ಪೊಲೀಸ್ ಆಯುಕ್ತರು ಸಹ ನಿಷೇಧಾಜ್ಞೆ ಹಿಂಪಡೆದು, ಸೂಕ್ಷ್ಮ ಪ್ರದೇಶಗಳಲ್ಲಿಪೊಲೀಸ್ ಬಿಗಿ ಬಂದೋಬಸ್ತ್‌ಗೆ ಕ್ರಮ ವಹಿಸಿದ್ದಾರೆ. ಈ ಮೂಲಕ ಹಳೇಹುಬ್ಬಳ್ಳಿ ಭಾಗ ಸಹಜ ಸ್ಥಿತಿಯತ್ತ ಮರಳಿದ್ದು, ನಿರಾಂತಕವಾಗಿ ವಾತಾವರಣ ಇದೆ ಎಂಬ ಸಂದೇಶ ರವಾನಿಸಿದ್ದಾರೆ.
Check Also
ಅಯೋಧ್ಯೆ ನಗರದಲ್ಲಿ ಚಾಕು ಇರಿತ: ಏಳು ಜನರನ್ನು ಕಂಬಿ ಹಿಂದೆ ಅಟ್ಟಿದ ಖಾಕಿ
Spread the loveಹುಬ್ಬಳ್ಳಿ: ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ಬಂಧಿಸಿ …