Breaking News

ಉಣಕಲ್ ಕೆರೆಗೆ ಶ್ರೀ ಚೆನ್ನಬಸವ ಸಾಗರ ನಾಮಕರಣ ವಿಳಂಬಕ್ಕೆ ಕಾರಣಕ್ಕಾಗಿ ಗಂಗಾಧರ ದೊಡ್ವವಾಡ ಆಗ್ರಹ

Spread the love

https://youtu.be/_M_n5ihk5mo

ಹುಬ್ಬಳ್ಳಿ -ಧಾರವಾಡ ಅವಳಿ ನಗರದ ಪ್ರಮುಖ ಆಕರ್ಷಣೆಯಾದ ಉಣಕಲ್ ಕೆರೆ ಐತಿಹಾಸಿಕವಾಗಿ ಬಹಳ ಪ್ರಸಿದ್ದಿ ಪಡೆದಿದ್ದು ಇದರ ದಂಡೆಯ ಮೇಲೆ ಉಳವಿ ಶ್ರೀ ಚನ್ನಬಸವಣ್ಣನವರ ದಿವ್ಯಾಲಯವಿದ್ದು 850 ವರ್ಷಗಳಿಂದ ಈ ಭಾಗದ ಪ್ರಮುಖ ಯಾತ್ರಾ ಸ್ಥಳವಾಗಿದೆ, ಆದ್ದರಿಂದ ಈ ಕೆರೆಗೆ “ಚನ್ನಬಸವ ಸಾಗರ” ಎಂದು ನಾಮಕರಣ ಮಾಡಲು ಮಹಾ ನಗರ ಪಾಲಿಕೆ ತುರ್ತು ಕ್ರಮ ಕೈಗೊಳ್ಳಬೇಕು, ಈ ವಿಷಯವು ಕೇವಲ ಬಸವ ಭಕ್ತರ ಭಾವನೆಗಳಿಗೆ ಗೌರವ ಕೊಡುವ ವಿಷಯ ಮಾತ್ರವಲ್ಲ ಅದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸುವ ವಿಷಯವೂ ಆಗಿದೆ ಎಂದು ಲಿಂಗಾಯತ ಸಮಾಜದ ಮುಖಂಡ ಹಾಗೂ ಕೈ ಪಕ್ಷದ ವಕ್ತಾರ ಗಂಗಾಧರ ದೊಡವಾಡ
ಹೇಳಿದ್ದಾರೆ. ಹುಬ್ಬಳ್ಳಿಯ ಮಿನಿವಿಧಾನ ಮುಂದೆ ಹೇಳಿಕೆ ನೀಡಿರುವ ಅವರು,
ಪಾಲಿಕೆಯ ಸರ್ವಸದಸ್ಯರು 2003ನೆಯ ಜನವರಿ 16 ರಂದು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದರು, ಇದು ನಿರ್ಣಯ ಸಂಖ್ಯೆ 569 ರಲ್ಲಿ ದಾಖಲಾಗಿದೆ, ಅದೇ ಸಭೆಯಲ್ಲಿಯೇ ಮುಂದಿನ ಪ್ರಕ್ರಿಯೆ ಕೈಗೊಳ್ಳಲು ಮಹಾಪೌರರು ಆಯುಕ್ತರಿಗೆ ಸೂಚಿಸಿದ್ದಾರೆ , ವಸ್ತುಸ್ಥಿತಿ ಹೀಗಿದ್ದಾಗಲೂ ಈ ನಿರ್ಣಯ ಏಕೆ ನಿರ್ಲಕ್ಷಕ್ಕೆ ಒಳಗಾಗಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಎಂದು ಪ್ರಶ್ನಿಸಿರುವ ಅವರು “ಪಾಲಿಕೆ ಸರ್ವ ಸದಸ್ಯರ ನಿರ್ಣಯ ಅಂದರೆ ಅದು ಅವಳಿನಗರದ ಪ್ರಜೆಗಳ ಆದೇಶ, ಅದನ್ನು ನಿರ್ಲಕ್ಷ ಮಾಡಿದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ಅವಮಾನವಾಗುತ್ತದೆ. ಉಣಕಲ್ ಗ್ರಾಮದ ಜನರು ಚನ್ನಬಸವಣ್ಣನವರ ಪರಮ ಭಕ್ತರು, ಉಳವಿಯಲ್ಲಿ ಶ್ರೀ ಚನ್ನಬಸವೇಶ್ವರ ಮಹಾ ರಥೋತ್ಸವ ನಡೆಯುವ ದಿನವೇ ಉಣಕಲ್ ದಲ್ಲೂ ಶ್ರೀ ಚನ್ನಬಸವೇಶ್ವರ ರಥೋತ್ಸವವನ್ನು ಆಚರಿಸುತ್ತಾರೆ
ಇಂತ ಮಹತ್ವದ ಸ್ಥಳ ಅವಳಿ ನಗರದ ಪ್ರಮುಖ ಪ್ರವಾಸಿ ತಾಣವಾಗಿದೆ. ಆದ್ದರಿಂದ ಪಾಲಿಕೆ ಶೀಘ್ರ ಜನಾದೇಶ ಜಾರಿಗೆ ತರಬೇಕು ಮಾತ್ರವಲ್ಲ ಗದುಗಿನಲ್ಲಿ ವಿಶ್ವಗುರು ಬಸವಣ್ಣನವರ ಬೃಹತ್ ಪ್ರತಿಮೆ ಇರುವದೋ ಅದೇ ರೀತಿಯಲ್ಲಿ ಕೆರೆಯ ಮಧ್ಯ ಭಾಗದ ನಡುಗಡ್ಡೆಯಲ್ಲಿ ವಚನ ಸಾಹಿತ್ಯ ಸಂರಕ್ಷಕ ಚಿನ್ಮಯ ಜ್ಞಾನಿ ಚನ್ನಬಸವಣ್ಣನವರ 196 ಅಡಿ ಎತ್ತರದ ಪ್ರತಿಮೆಯನ್ನು ಸರ್ಕಾರ ನಿರ್ಮಿಸಿ ಹುಬ್ಬಳ್ಳಿಯನ್ನು ನಾಡಿನ ಹೆಮ್ಮೆಯ ಪ್ರವಾಸಿ ಕೇಂದ್ರವನ್ನಾಗಿ ಬೆಳೆಸಬೇಕು ಎಂದು ಗಂಗಾಧರ ದೊಡವಾಡ ಆಗ್ರಹಿಸಿದ್ದಾರೆ.


Spread the love

About Karnataka Junction

[ajax_load_more]

Check Also

ಕೇಂದ್ರ ಬಜೆಟ್ ದೇಶದ ಸಮಗ್ರ ಅಭಿವೃದ್ದಿಗೆ ನೀಲನಕ್ಷೆ- ಡಾ. ಕ್ರಾಂತಿ ಕಿರಣ್

Spread the love  ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ನಿರ್ಮಾಣದ ಗುರಿಗೆ ಪೂರಕವಾಗಿ ಕೇಂದ್ರದ ವಿತ್ತ …

Leave a Reply

error: Content is protected !!