ಹುಬ್ಬಳ್ಳಿ: ಕರ್ನಾಟಕದಲ್ಲಿ ಮೂರನೇ ನೋವಾ ಕೃತಕ ಗರ್ಭಧಾರಣೆ ಕೇಂದ್ರ ( ಆರ್ ಯುಎಫ್ ) ವನ್ನು ಹುಬ್ಬಳ್ಳಿಯ ಗೋಕುಲರಸ್ತೆಯಲ್ಲಿ ಆರಂಭಿಸಲಾಗಿದೆ ಎಂದು ಹುಬ್ಬಳ್ಳಿಯ ಫರ್ಟಿಲಿಟಿ ಕನ್ಸಲ್ಟೆಂಟ್ ಡಾ.ವಿನುತಾ ಕುಲಕರ್ಣಿ ಹೇಳಿದರು.
ನಗರದ ಖಾಸಗಿ ಹೊಟೆಲ್ ನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಭಾರತದ ಪ್ರಮುಖ ಫರ್ಟಿಲಿಟಿ ಮತ್ತು ಐವಿಎಫ್ ಸರಪಳಿಗಳಲ್ಲಿ ಒಂದಾದ ನೋವಾ ಐವಿಎಫ್ ಫರ್ಟಿಲಿಟಿ ಸೆಂಟರ್. ಈಗಾಗಲೇ ದೇಶದ ಹಲವಾರು ಪ್ರಮುಖ ನಗರಗಳಲ್ಲಿ ತನ್ನ ಸೇವೆಯನ್ನು ನೀಡುತ್ತಿದೆ. ಅದರಂತೆ ಹುಬ್ಬಳ್ಳಿಯ ಜನರಿಗೆ ದಂಪತಿಗಳಿಗೆ ಅತ್ಯಾಧುನಿಕ ಫರ್ಟಿಲಿಟಿ ಚಿಕಿತ್ಸೆ ನೀಡಲು ನೂತನ ಕೇಂದ್ರವನ್ನು ಪ್ರಾರಂಭಿಸಿದೆ ಎಂದರು.
ಇನ್ನು ಬಂಜೆತನವು ದಂಪತಿಗಳ ಮೇಲೆ ಭಾವನಾತ್ಮಕವಾಗಿ ಪರಿಣಾಮ ಬೀರುತ್ತದೆ. ಇದು ಆತಂಕ, ಸಾಮಾಜಿಕ ಪ್ರತ್ಯೇಕತೆಗೆ ಕಾರಣವಾಗುತ್ತದೆ. ಅದರೆ ಫರ್ಟಿಲಿಟಿ ಚಿಕಿತ್ಸೆ ಕುರಿತು ಕೆಲವು ಅನುಮಾನಗಳಿದ್ದು, ನಮ್ಮ ಕೇಂದ್ರದಲ್ಲಿ 100 ಜನರನ್ನು ಫರ್ಟಿಲಿಟಿ ಚಿಕಿತ್ಸೆಗೆ ಒಳಪಡಿಸಿದರೇ ಶೇ.65 ರಿಂದ 70 ರಷ್ಟು ಸಕ್ಸಸ್ ರೇಟ್ ನಮಗಿದೆ. ಈ ದಿಸೆಯಲ್ಲಿ ಜನರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ ಹುಬ್ಬಳ್ಳಿಯ ಶಾಖೆ ಪ್ರಾರಂಭಿಸಿದ್ದು, ಮುಂದೆ ಧಾರವಾಡ, ಕುಂದಗೋಳ, ಹಾವೇರಿ, ರಾಣೆಬೆನ್ನೂರು, ಗದಗ ಮತ್ತು ಬಾಗಲಕೋಟೆಯಲ್ಲಿ ಶಾಖೆ ವಿಸ್ತರಣೆ ಮಾಡುವ ಉದ್ದೇಶ ಹೊಂದಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಫರ್ಟಿಲಿಟಿಯ ಸಿಇಓ ಶೋಬಿತ್ ಅಗರ್ವಾಲ್, ಡಾ.ತೃಪ್ತಿ ಗಣಪತಿ ಇದ್ದರು.
Check Also
ಆಕಾಶ್ ನಿಂದ (ಎಇಎಸ್ ಎಲ್) ನ ಅಂತೆ 2024 ಪರೀಕ್ಷೆ ಘೋಷಣೆ
Spread the loveಹುಬ್ಬಳ್ಳಿ : ಆಕಾಶ್ ಎಜುಕೇಶನ್ ಸರ್ವೀಸಸ್ ಲಿಮಿಟೆಡ್ (AESL) ತನ್ನ ಮಹತ್ವಾಕಾಂಕ್ಷೆಯ ವಿದ್ಯಾರ್ಥಿವೇತನ ಪರೀಕ್ಷೆಯಾದ ಆಕಾಶ್ ನ್ಯಾಷನಲ್ …