ಸಮವಸ್ತ್ರ ಹಂಚಿಕೆಯಲ್ಲೂ ನಡೆಯಿತಾ ಗೋಲ್ ಮಾಲ್ ?

Spread the love

ಮಂಗಳೂರು : ನಗರಕ್ಕೆ ಭೇಟಿ ನೀಡಿದ ಶಿಕ್ಷಣ ಸಚಿವ ಬಿ‌.ಸಿ.ನಾಗೇಶ್ ಅವರಿಗೆ ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರು ಘೇರಾವ್ ಹಾಕಲು ಯತ್ನಿಸಿದ‌ ಘಟನೆ ‌ನಡೆದಿದೆ. ಮಂಗಳೂರಿನ ಹಂಪನಕಟ್ಟೆ ಬಳಿ
ಪದವಿ ಪೂರ್ವ ಕಾಲೇಜು ಕಟ್ಟಡ ಶಿಲಾನ್ಯಾಸಕ್ಕೆ ಸಚಿವ ನಾಗೇಶ್ ಆಗಮಿಸಿದ್ದರು. ಈ ವಿಷ್ಯ ತಿಳಿದ ಸಿಎಫ್ಐ ಕಾರ್ಯಕರ್ತರು ಕಾರ್ಯಕ್ರಮಕ್ಕೆ ನುಗ್ಗಲು ಯತ್ನಿಸಿದ್ರು. ಈ ವೇಳೆ ರಸ್ತೆಯಲ್ಲೇ ಕಾರ್ಯಕ್ರಮದ ವೇದಿಕೆಯ ಅನತಿ ದೂರದಲ್ಲಿ ಪೊಲೀಸರು ಅವ್ರನ್ನು ತಡೆದ್ರು.
ಸಮವಸ್ತ್ರ ಹಂಚಿಕೆಯಲ್ಲಿ ಸಚಿವರಿಂದ ಗೋಲ್ ಮಾಲ್ ಆರೋಪಿಸಿ ಸಿಎಫ್ಐ ಕಾರ್ಯಕರ್ತರು ಬಿ.ಸಿ.ನಾಗೇಶ್ ಗೋ ಬ್ಯಾಕ್ ಅಂತ ಘೋಷಣೆ ಕೂಗಿ ಧಿಕ್ಕಾರ ಕೂಗಿದ್ರು. ಸದ್ಯ ಮಂಗಳೂರು ಪುರಭವನದ ಆವರಣದಲ್ಲಿ ಸಿಎಫ್ಐ ಕಾರ್ಯಕರ್ತರನ್ನ ಪೊಲೀಸ್ರು ಕೂಡಿ ಹಾಕಿದ್ದಾರೆ.


Spread the love

Leave a Reply

error: Content is protected !!