ಹುಬ್ಬಳ್ಳಿ : ಮೂಲಭೂತ ಸೌಕರ್ಯ ಒದಗಿಸುವಲ್ಲಿ ಮಾಜಿ ಸಿಎಂ, ಮಾಜಿ ಸಚಿವ 6 ಬಾರಿ ಶಾಸಕರಾದ ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ವೈಫಲ್ಯ ಖಂಡಿಸಿ ವಿನೂತನವಾಗಿ ನಗರದಲ್ಲಿ ಪ್ರತಿಭಟನೆ ಮಾಡಲಾಯಿತು. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರದ ವಾರ್ಡ್ ನಂಬರ್ 58 ರಲ್ಲಿ ಪ್ರತಿಷ್ಠಿತ ಓಂ ಹೋಟೆಲ್ ಎದುರುಗಡೆ ಕೇಕ್ ಕಾರ್ನರ್ ದಿಂದ ಸೈಂಟ್ ಮೈಕಲ್ ಸ್ಕೂಲ್ ಹತ್ತಿರದ ಹದಗೆಟ್ಟ ರಸ್ತೆ ಮೇಲೆ ರಂಗೋಲಿ ಹಾಕಿ ಸಾರ್ವಜನಿಕರಿಂದ ವಿನೂತನ ಪ್ರತಿಭಟನೆ ಮಾಡಲಾಯಿತು.
ಅಲ್ಲದೇ ಒಳಚರಂಡಿ ಕಾಮಗಾರಿ ಮಾಡಿ ಒಂದು ವರ್ಷ ಗತಿಸಿದರೂ ಹಲವಾರು ಅರ್ಜಿಗಳು ಶಾಸಕರಾದ ಶ್ರೀ ಜಗದೀಶ್ ಶೆಟ್ಟರ್ ಅವರಿಗೆ ಸಾರ್ವಜನಿಕರು ಮನವಿ ಮಾಡಿದರು ರಸ್ತೆ ದುರಸ್ತಿ ಕೈಗೊಳ್ಳುತ್ತಿಲ್ಲ ಎಂದು ಹುಬ್ಬಳ್ಳಿ ಧಾರವಾಡ ಜನ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಕಾಂಗ್ರೆಸ್ ಮುಖಂಡರಾದ ಸಂತೋಷ ಚಲವಾದಿ, ಹೂವಪ್ಪ ದಾಯಿಗೋಡಿ, ಸ್ಥಳೀಯ ನಿವಾಸಿಗಳು ತೇಜರಾಜ್ ಜೈನ್, ಪ್ರೀತೇಶ ಪಾಲ್ಗೋಟ, ಸುರೇಶ ಗಾಂಧಿಮೂತ, ಅಶೋಕ ನರಗುಂದ ಇತರರು ಪಾಲ್ಗೊಂಡಿದ್ದರು.
Check Also
*ಬಂದ್ ಎನ್ನುವ ಕಾನ್ಸೆಪ್ಟ್ ಇಲ್ಲ ಬಲವಂತವಾಗಿ ಬಂದ್ ಮಾಡಿಸುವ ಹಾಗಿಲ್ಲ- ಪೊಲೀಸ್ ಕಮೀಷನರ್ ಖಡಕ್ ಎಚ್ಚರಿಕೆ
Spread the loveಹುಬ್ಬಳ್ಳಿ: ನಾಳೆ ಹುಬ್ಬಳ್ಳಿ ಧಾರವಾಡ ಬಂದ್ ಗೆ ಕರೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಬಲವಂತವಾಗಿ ಬಂದ್ ಮಾಡಿಸುವ …