ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ

Spread the love

ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪರೀಕ್ಷೆ ನೇಮಕಾತಿ‌ಯಲ್ಲಿ ನಡೆದ ಅಕ್ರಮದ ಬೆನ್ನಲ್ಲೇ‌ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಸಂಬಂಧ ಮೈಸೂರು ಮೂಲದ ಅತಿಥಿ ಉಪನ್ಯಾಸಕಿ ಸೌಮ್ಯಳನ್ನು ಮಲ್ಲೇಶ್ವರಂ‌ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಂದನೇ ಎಸಿಎಂಎಂ‌ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಶ್ನೆಪತ್ರಿಕೆ‌ ಸೋರಿಕೆ ಪ್ರಕರಣ ಸಂಬಂಧ‌ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ದೂರಿನ ಮೇರೆಗೆ ಮೈಸೂರಿನ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸೌಮ್ಯ ಎಂಬವರನ್ನು ಬಂಧಿಸಲಾಗಿದೆ. ಈಕೆ ಐಎಎಸ್ ಆಗಲು ತಯಾರಿ ನಡೆಸುತ್ತಿದ್ದಳು ಎಂದು ತಿಳಿದು ಬಂದಿದೆ. ಭೂಗೋಳ ಶಾಸ್ತ್ರದ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆ ಪೊಲೀಸರು ಸೌಮ್ಯಳನ್ನು ಮೈಸೂರಿನಲ್ಲಿ ವಶಕ್ಕೆ‌ ಪಡೆದುಕೊಂಡಿದ್ದು, ಸದ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕಳೆದ ಮಾರ್ಚ್ 14ರಂದು ಭೂಗೋಳ‌ಶಾಸ್ತ್ರ ಪರೀಕ್ಷೆ ನಡೆದಿತ್ತು. ಅಂದು ಬೆಳಗ್ಗೆ 8-30ಕ್ಕೆ ಸೌಮ್ಯ ಪರೀಕ್ಷಾ ಕೇಂದ್ರದ ಒಳಗೆ ಹೋಗಿದ್ದರು‌. ಕೆಲವೇ ನಿಮಿಷದಲ್ಲಿ ಆಕೆಯ ಮೊಬೈಲ್ ನಿಂದ ಕೈ ಬರಹದ ಪ್ರಶ್ನೆಯನ್ನು ಮೊಬೈಲ್ ಮೂಲಕ ಸೋರಿಕೆ ಮಾಡಲಾಗಿದೆ. ಪರೀಕ್ಷೆ ಆರಂಭಕ್ಕೂ 40 ನಿಮಿಷ ಮೊದಲು ಪರೀಕ್ಷಾ ಕೊಠಡಿಗೆ ಪೇಪರ್ ಹೋಗಿರುತ್ತೆ. ಹೀಗಾಗಿ ಇದು ಎಡಿಟೆಡ್ ವರ್ಸನ್ ಇರಬಹುದು ಎಂದು ಕೆಇಎ ಅಧಿಕಾರಿಗಳು ಶಂಕಿಸಿದ್ದಾರೆ. ಅಲ್ಲದೆ‌ ಸೌಮ್ಯ ಬಳಿ ಇದ್ದ ಪ್ರಶ್ನೆಗಳು ಕ್ರಮವಾಗಿ ಇರಲಿಲ್ಲ ಎಂದು ಹೇಳಲಾಗಿದೆ. ಸೋರಿಕೆಯಾದ 17 ಪ್ರಶ್ನೆಗಳಲ್ಲಿ 11 ಪ್ರಶ್ನೆಗಳು ಸೋರಿಕೆಯಾದ ಪ್ರಶ್ನೆಪತ್ರಿಕೆಯಲ್ಲಿತ್ತು. ಮತ್ತು ಪ್ರಶ್ನೆಗಳು ಕೈ ಬರಹದಲ್ಲಿ ಇದ್ದುದರಿಂದ ಅಷ್ಟು ಬೇಗ ಬರೆದುಕೊಳ್ಳಲು ಸಾಧ್ಯವಿಲ್ಲ ಜೊತೆಗೆ ಪ್ರಶ್ನೆ ಪತ್ರಿಕೆಗಳು ತೀರಾ ಕಷ್ಟದ್ದಾಗಿದ್ದು, ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೆಚ್ಚು ಸಮಯ ಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸದ್ಯ ಆಕೆಯಿಂದ ಮೊಬೈಲ್‌ ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಕುರಿತು ತನಿಖೆ ಮಾಡಲಾಗುತ್ತಿದೆ‌‌‌.


Spread the love

About gcsteam

    Check Also

    ಸಿದ್ದರಾಮಯ್ಯ ಹೇಳಿಲ್ವಾ ಫ್ರೀ ಎಂದು, ಕರೆಂಟ್ ಬಿಲ್ ಕಟ್ಟಲ್ಲವೆಂದು ಆವಾಜ್ ಹಾಕಿದ ಗ್ರಾಮಸ್ಥರು

    Spread the loveಹುಬ್ಬಳ್ಳಿ:  ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ್ದ 200 ಯುನಿಟ್ ವಿದ್ಯುತ್ ಉಚಿತದ ಗ್ಯಾರಂಟಿ ಇಸ್ಕಾಂ ಸಿಬ್ಬಂದಿಯ …

    Leave a Reply