ಹುಬ್ಬಳ್ಳಿ:ಮಳೆ ಬಿರುಗಾಳಿ ಸಿಡಿಲಿಗೆ ಕರುನಾಡು ಬೆಚ್ಚಿಬಿದ್ದಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಗುಡುಗು ಸಿಡಿಲು ಸಮೇತ ಮಳೆ ಬೆನ್ನೆಲೆಯಲ್ಲಿ ಸಿಡಿಲು ಬಡಿದು ಮಲ್ಲಮ್ಮ ಕಲ್ಮೇಶ ವಟವಟಿ (38) ಸಾವನಪ್ಪಿದ್ದಾರೆ.
ಇಂದು ಸಂಜೆಯ ವೇಳೆಗೆ ಹೊಲದಿಂದ ಮನೆಗೆ ಆಗಮಿಸುತ್ತಿರುವ ವೇಳೆಯಲ್ಲಿ ಗುಡುಗು ಸಿಡಿಲು ಸಮೇತ ಮಳೆಯಿಂದ ಸಿಡಿಲು ಬಡಿದು ರೈತ ಮಹಿಳೆ ಸಾವನಪ್ಪಿದ್ದಾಳೆ. ಸಿಡಿಲು ಮಹಿಳೆಯ ಹೊಟ್ಟೆಯ ಭಾಗಕ್ಕೆ ಅಪ್ಪಳಿಸಿದ ಬೆನ್ನೆಲ್ಲೆಯಲ್ಲಿ ಮಹಿಳೆಯ ಸಂಪೂರ್ಣ ದೇಹ ಛಿಧ್ರಗೊಂಡಿದೆ.
ಇನ್ನೂ’ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ತೆಲಗಿ ಗ್ರಾಮದಲ್ಲಿ ಜಗದೀಶ್ ಹಣಮಂತ ಸತ್ತಿಗೇರಿ ಎಂಬ ವ್ಯಕ್ತಿ ಸಿಡಿಲಿಗೆ ಬಲಿಯಾಗಿದ್ದಾನೆ. ತೋಟದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
*ಹುಬ್ಬಳ್ಳಿ ವರದಿ* ತಾಲೂಕಿನ ಮಂಟೂರ ಗ್ರಾಮದಲ್ಲಿ ಮಳೆ ಗಾಳಿಗೆ ಕಲ್ಲಪ್ಪ ಹೊನ್ನನಾಯ್ಕರ ಅವರಿಗೆ ಸೇರಿದ ಮನೆಯು ಕುಸಿದು ಬಿದ್ದ ಪರಿಣಾಮ ಒಂದು ಎತ್ತು ಮೃತಪಟ್ಟಿದೆ.
ಭಾರೀ ಮಳೆ ಹಾಗೂ ಸಿಡಿಲು ಮಿಶ್ರಿತ ಮಳೆ ಸುರಿದಿದ್ದು ಏಕಾಏಕಿ ಬಿಸಿದ ಗಾಳಿಗೆ ಮನೆಯ ಮೇಲ್ಛಾವಣಿ ಕುಸಿದು ಬೆಲೆ ಬಾಳುವ ಎತ್ತು ಸಾವನ್ನಪ್ಪಿದೆ. ಒಟ್ಟಾರೆ ವರುಣನ ಆರ್ಭಟ ಹಾಗೂ ಮಳೆ ಗಾಳಿ ಸಿಡಿಲಿಗೆ ಕರುನಾಡು ಬೆಚ್ಚಿಬಿದ್ದಿದೆ.