https://youtu.be/KdeJu9-br-I
ಹುಬ್ಬಳ್ಳಿ : ಹಸಿದ ಹೊಟ್ಟೆಗಳು, ದುಡಿಮೆ ಇಲ್ಲದೆ ಖಾಲಿ ಇರುವ ಕೈಗಳು, ಕಿತ್ತು ತಿನ್ನುವ ಬಡತನ, ಮನೆ ತುಂಬಾ ಮಕ್ಕಳು. ಸರ್ಕಾರೀ ಒಡೆತನದ ಯೋಜನೆಗಳು ಪತ್ರಿಕೆಗಳಿಗೆ ಸೀಮಿತವಾಗಿದು ಅದು ಇನ್ನೂ ಪೂರ್ತಿಯಾಗಿ ಹೆಗ್ಗೇರಿ ಗೆ ಹತ್ತಿರವಿರುವ ಜೆ.ಪಿ ನಗರ್ ನಿವಾಸಿಗಳಿಗೆ ಸಿಗದಿರುವದು ಹೆಚ್ಚಾಗಿ ಕಂಡು ಬರುತದ್ದೆ.
ಈ ಪ್ರದೇಶದಲ್ಲಿ ಅವಿದ್ಯಾವಂತರು, ಸರಕಾರಿ ಸೌಲಭ್ಯಗಳಿಂದ ವಂಚಿತರು, ನಿರುದ್ಯೋಗಿಗಳು, ನಿರ್ದಿಷ್ಟವಾಗಿ ಇದೆ ಕೆಲಸ ಮಾಡುತ್ತೇವೆ ಅನ್ನುವವರು ಕಡಿಮೆ. ಇವರನ್ನು ಮಾತನಾಡಿಸಿದಾಗ ದುಡಿಯುವ ಕೈಗಳಿಗೆ ಕೆಲಸ ಕೊಟ್ಟರೆ ಸಾಕು ನಾವು ಸರ್ಕಾರದಿಂದ ಹೆಚ್ಚೇನು ನಿರೀಕ್ಷಿಸುವುದಿಲ್ಲ ಭಿಕ್ಷೆ ಬೇಡುವುದಕ್ಕಿಂತ ದುಡಿದು ತಿನ್ನುವುದಕ್ಕೆ ಹೆಚ್ಚಿನ ಪ್ರಶಸ್ತ ಕೊಟ್ಟಂತಹ ಜನ.ಲಾಕ್ ಡೌನ ತಮ್ಮ ಬದುಕನೇ ಛಿದ್ರವಾಗಿಸಿದ್ದು ತಾವು ಹಸಿದ ಹೊಟ್ಟೆಯಲ್ಲಿ ಮಲಗಿದ್ದರು.
ಪತ್ರಿಕೆ ಪ್ರತಿನಿಧಿಗಳಿಗೆ ತಮ್ಮ ಬಡತನ ತೋರಿಸದ್ದೆ ಅವರ ಸ್ವಾಬಿಮಾನ್ ಎದ್ದು ಕಾಣುತಿತ್ತು. ಎಷ್ಟೋ ವಯಸಾದ್ ಹಿರಿಯ ಜೀವಿಗಳು, ಔಷದ, ಉತ್ತಮ ಆಹಾರದ ಕೊರತೆಯಿಂದ ತೊಂದರೆಗೆ ಒಳಗಾಗಿದ್ದು ಕಂಡುಬಂದಿತು. ಸರ್ಕಾರ ಈ ರೀತಿ ಲಾಕ್ ಡೌನ್ ಮಾಡುವ ಬದಲು ಪ್ರತಿ ಮನೆಗೆ ಪ್ರತಿ ತಿಂಗಳು ಮಾಸ್ಕ್ ಕೊಟ್ಟು ಪ್ರತಿಯೊಬ್ಬರೂ ರಸ್ತೆ ಗೆ ಬಂದಾಗ ಹಾಕಿ ಕೊಳ್ಳುವಂತೆ ಮಾಡಿದರೆ ಸಾಕು. ಇನ್ನಾದರೂ ಅಂಗಡಿ ಮುಗ್ಗಟ್ಟು ಬಂದು ಮಾಡದೇ ಲಾಕ್ ಡೌನ್ ತೆಗೆಯಬೇಕು ದುಡಿಯುವ ಜನರಿಗೆ ಕೆಲಸ ಕೊಡಬೇಕು. ಕರೋನ ದಿಂದ್ ಸಾಯುವುದಕ್ಕಿಂತ ಹೆಚ್ಚು ಜನ್ ಊಟ ವಿಲ್ಲದೆ ಸಾಯುವ ಪರಿಸ್ಥಿತಿ ನಿರ್ಮಾಣವಾಗಬಾರದು. ಹೀಗೆ ಹತ್ತು ಹಲವಾರು ತೊಂದರೆಗಳನ್ನು ಅನುಭವಿಸುವ ಜನಸಾಮಾನ್ಯರು ವಾಸಿಸುವ ಹೆಗ್ಗೇರಿಯ ಜೆಪಿ ನಗರನಲ್ಲಿ ಎಲ್ಲ ಜಾತಿ, ಧರ್ಮಗಳ ಜನರ ವಾಸಿಸುತ್ತಿದ್ದಾರೆ. ಕಷ್ಟಗಳಿಗೆ ಮಿಡಿಯುವಂತ ಹೃದಯವಂತ ಜನ ಹಾಗೂ ಸಂಘ-ಸಂಸ್ಥೆಗಳು ಒಮ್ಮೆ ಇತ್ತ ಕಡೆ ನೋಡಲು ವಿನಂತಿದರು.