ತೆಲುಗು ಸಿನಿಮಾ ರಂಗದಲ್ಲಿ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರೋ ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ ನಟನೆಯ ಆಚಾರ್ಯ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಿನ್ನೆ ನಡೆಯಿತು. ಈ ವೇಳೆ ಸಿನಿಮಾ ತಂಡಕ್ಕೆ ಶುಭಕೋರಿ ಮಾತನಾಡಿದ ನಟ ಚಿರಂಜೀವಿ ಅವರು ಕನ್ನಡ ಕೆಜಿಎಫ್ ಸಿನಿಮಾವನ್ನು ಉಲ್ಲೇಖಿಸಿ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸ್ಟಾರ್ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರನ್ನು ಉದ್ದೇಶಿಸಿ ಮಾತನಾಡಿದ ಚಿರಂಜೀವಿ ಅವರು, ರಾಜಮೌಳಿ ಅವರು ಹಾಕಿದ ಹಾದಿಯಲ್ಲಿ ಈಗ ಚಿತ್ರರಂಗ ಸಾಗುತ್ತಿದ್ದು, ಯಾವುದೇ ನಿರ್ದೇಶಕ ಸಿನಿಮಾ ಮಾಡಿದ್ರು ಕೂಡ ಇಂಡಿಯನ್ ಸಿನಿಮಾ ಆಗ್ತಿದೆ. ಇದಕ್ಕೆ ಉದಾಹರಣೆ ಎಂದರೇ ಇತ್ತೀಚೆಗೆ ತೆರೆಕಂಡ ಅಲ್ಲು ಅರ್ಜುನ್ರ ಪುಷ್ಪ, ಪ್ರಶಾಂತ್ ನೀಲ್ ನಿರ್ದೇಶಕದ ಯಶ್ ಅವರ ಕೆಜಿಎಫ್ ಸಿನಿಮಾ, ಆರ್ಆರ್ಆರ್ ಸಿನಿಮಾದಲ್ಲಿ ನಟಿಸಿದ ರಾಮ್ಚರಣ್, ಜ್ಯೂ.ಎನ್ಟಿಆರ್, ಎಲ್ಲರಿಗಿಂತ ಮುನ್ನ ಬಂದ ಪ್ರಭಾಸ್ ಇವರೆಲ್ಲರೂ ಕೂಡ ಪ್ಯಾನ್ ಸ್ಟಾರ್ ಗಳಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನೂ, ‘ಆಚಾರ್ಯ’ ಚಿತ್ರ ಇದೇ ಏಪ್ರಿಲ್ 29ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಚಿರಂಜೀವಿ ಮತ್ತು ರಾಮ್ ಚರಣ್ ಜೊತೆಗೆ ಕಾಜಲ್ ಮತ್ತು ಪೂಜಾ ಹೆಗ್ಡೆ ಕೂಡ ನಟಿಸಿದ್ದಾರೆ.
