ಬಾಲಕಿಗೆ ಮೊಬೈಲ್ ನಂಬರ್ ಕೊಟ್ಟ ನಿರ್ವಾಹಕನಿಗೆ ಸರಿಯಾಗಿ ಧರ್ಮದೇಟು

Spread the love

ಮಂಗಳೂರು : ಬಸ್ ನಲ್ಲಿ ಬಾಲಕಿಗೆ ಮೊಬೈಲ್ ನಂಬರ್ ಕೊಟ್ಟ ಕಂಡಕ್ಟರ್‌ನಿಗೆ ಬಾಲಕಿಯ ತಾಯಿ ಹಿಗ್ಗಾಮುಗ್ಗ ಥಳಿಸಿದ್ದಾಳೆ. ಈ ಘಟನೆ ಮಂಗಳೂರು ನಗರದ ಬೋಂದೆಲ್‌ನಲ್ಲಿ ನಡೆದಿದೆ. ಆರೋಪಿತ ಬಸ್ ಕಂಡಕ್ಟರ್ ಬಾಲಕಿಗೆ ತನ್ನ ಮೊಬೈಲ್ ನಂಬರ್ ನೀಡಿದ್ದಲ್ಲದೇ ಕಾಲ್ ಮಾಡಿ ಮಾತನಾಡಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವಿಷ್ಯ ತಿಳಿದ ಬಾಲಕಿಯ ತಾಯಿ ನಗರದ ಬೋಂದೆಲ್‌ನಲ್ಲಿ ಬಸ್ಸನ್ನು ತಡೆದು ನಿಲ್ಲಿಸಿ ಕಂಡೆಕ್ಟರ್‌ನನ್ನು ಕೆಳಗಿಳಿಸಿ ತರಾಟೆಗೆ ತೆಗೆದುಕೊಂಡಿದ್ದಾಳೆ.

8ನೇ ತರಗತಿ ಓದುತ್ತಿರುವ ಬಾಲಕಿ ಬಸ್‌ನಲ್ಲಿ ಪ್ರಯಾಣಿಸಿದ ಮೊದಲ ದಿನದಂದೇ ಕಂಡೆಕ್ಟರ್ ತನ್ನ ಮೊಬೈಲ್ ನಂಬರ್ ಕೊಟ್ಟಿದ್ದ ಎಂದು ಹೇಳಲಾಗಿದೆ. ಈ ವಿಚಾರವನ್ನು ಬಾಲಕಿ‌ ಮನೆಯಲ್ಲಿ ತಿಳಿಸಿದ್ದು, ಆಕ್ರೋಶಗೊಂಡ ಬಾಲಕಿಯ ತಾಯಿ ಕಂಡೆಕ್ಟರ್‌ಗೆ ಸರಿಯಾಗಿ ಧರ್ಮದೇಟು ನೀಡಿದ್ದಾಳೆ. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ. ಸದ್ಯ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ‌.


Spread the love

Leave a Reply

error: Content is protected !!