Breaking News

ಶವ ಅಂತ್ಯಸಂಸ್ಕಾರಕ್ಕೆ ಬ್ಯಾಲ್ಯಾಳ ಗ್ರಾಮಸ್ಥರ ಪರದಾಟ

Spread the love

ನವಲಗುಂದ; ತಾಲ್ಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಸಾವನ್ನಪ್ಪಿದ ಯಲ್ಲಮ್ಮ ಮಂಟೂರು ಎಂಬ ಮಹಿಳೆ ಅಂತ್ಯ ಸಂಸ್ಕಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೇಲ ವರ್ಷಗಳಿಂದ ಖಾಸಗಿ ಅವರ ಹೊಲದಲ್ಲಿ ಶವ ಹೂಳಲಾಗುತಿತ್ತು. ಈಗ ಸಶ್ಮಾನ ಜಾಗೆಯ ಮಾಲೀಕತ್ವ ಹೊಂದಿದವರು ಅಂತ್ಯ ಸಂಸ್ಕಾರಕ್ಕೆ ಅನುಮತಿ ನೀಡದ ಕಾರಣ ಈ ಸಮಸ್ಯೆ ಉಂಟಾಗಿದ್ದು ಅಂತ್ಯ ಸಂಸ್ಕಾರಕ್ಕೆ ಸರ್ಕಾರಿ ಜಾಗೆಗಾಗಿ ಸಾಕಷ್ಟು ಸಲ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೆ ಇದುರೆಗೆ ಸರ್ಕಾರದಿಂದ ಜಾಗೆ ನೀಡಿಲ್ಲ‌.
ಇದರಿಂದ ಇಬ್ಬರು ಖಾಸಗಿ ಮಾಲೀಕತ್ವದ ಜಮೀನುಗಳಲ್ಲಿ ಅಂತ್ಯ ಸಂಸ್ಕಾರ ಮಾಡಲು ಇಂದು ತಕಾರರು ತೆಗೆದರು. ಆದರೆ ಈಗ ಆ ಖಾಸಗಿ ಮಾಲೀಕತ್ವದ ಜಾಗೆಯಲ್ಲಿ ಅಂತ್ಯ ಸಂಸ್ಕಾರ ಮಾಡಲು ಅನುಮತಿ ನೀಡದ ಕಾರಣ ಗ್ರಾಮಸ್ಥರ ಪರದಾಟ ಮಾಡುತಿದ್ದಾರೆ. ಗ್ರಾಮದಲ್ಲಿ
ಮದುವೆ ಇರುವ ಕಾರಣಕ್ಕೆ ಬೇಗನೆ ಅಂತ್ಯಕ್ರಿಯೆ ಮುಗಿಸಿ ಎಂದು ಗ್ರಾಮದ ಕೆಲ ಮುಖಂಡರು ಮನವಿ ಮಾಡಿದರು ಏನು ಪ್ರಯೋಜನವಾಗಿಲ್ಲ
ಇತ್ತ ಅಂತ್ಯಕ್ರಿಯೆ ಗೆ ಅಡ್ಡಿ ಅತ್ತು ಮದುವೆ ಸಮಾರಂಭ ಸಹ ನಡೆಯಯತಿಲ್ಲ ಇದರಿಂದ ದಿಕ್ಕು ತೋಚದೆ ನಿಂತ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಸಕ್ಕರೆ, ಜವಳಿ ಹಾಗೂ ಕೈಮಗ್ಗ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಸ್ವಕ್ಷೇತ್ರದಲ್ಲಿ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Spread the love

About Karnataka Junction

[ajax_load_more]

Check Also

ರಾಜ್ಯ ಪ್ರಶಸ್ತಿಗೆ ಈರಪ್ಪ ಎಮ್ಮಿ ಆಯ್ಕೆ

Spread the loveರಾಜ್ಯ ಪ್ರಶಸ್ತಿಗೆ ಈರಪ್ಪ ಎಮ್ಮಿ ಆಯ್ಕ ಹುಬ್ಬಳ್ಳಿ: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ …

Leave a Reply

error: Content is protected !!